ಕಾಸರಗೋಡು: ಸರ್ಕಾರ ನಡೆಸುವ ಅಭಿವೃದ್ಧಿ ಕಾರ್ಯಗಳನ್ನು ಜನರ ಬಳಿ ತಲುಪಿಸುವಲ್ಲಿ ಮಾಧ್ಯಮಗಳು ನಿರ್ವಹಿಸುವ ಪಾತ್ರ ಮಹತ್ತರವಾದುದು ಎಂದು ಬಂದರು, ಸಂಗ್ರಹಾಲಯ ಪ್ರಾಚ್ಯವಸ್ತು ಖಾತೆ ಸಚಿವ ಅಹಮ್ಮದ್‍ದೇವರಕೋವಿಲ್ ಹೇಳಿದರು.
ಅವರು ಎರಡನೇ ಪಿಣರಾಯಿ ವಿಜಯನ್ ಸರ್ಕಾರದ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಕಾಞಂಗಾಡು ಆಲಾಮಿಪಲ್ಲಿಯಲ್ಲಿ ಆಯೋಜಿಸಲಾಗಿದ್ದ ನನ್ನ ಕೇರಳ ಪ್ರದರ್ಶನ ಮತ್ತು ಮಾರಾಟ ಮೇಳದ ಜಿಲ್ಲಾಮಟ್ಟದ ಸಂಘಟನಾ ಸಮಿತಿಯು ಸ್ಥಾಪಿಸಿದ ಮಾಧ್ಯಮ ಪ್ರಶಸ್ತಿ ವಿತರಿಸಿ ಮಾತನಾಡಿದರು. ದೇಶದ ಸುಸ್ಥಿರ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಸರ್ಕಾರ ನಡೆಸುವ ಯೋಜನೆಗಳು ಎಲ್ಲಾ ವಿಭಾಗಗಳಲ್ಲಿಯೂ ತಲುಪಿಸಿ ಎಂಬ ಮಹತ್ತರ ಕಾರ್ಯವನ್ನು ಮಾಧ್ಯಮ ಸಂಸ್ಥೆಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಅತ್ಯುತ್ತಮ ದೃಶ್ಯ ಮಾಧ್ಯಮ ವರದಿಗಾರನಾಗಿ ಏಷ್ಯಾನೆಟ್ ನ್ಯೂಸ್‍ನ ಫೈಸಲ್ ಬಿನ್ ಅಹಮ್ಮದ್ ಆಯ್ಕೆಯಾಘಿದ್ದಾರೆ. ಅತ್ಯುತ್ತಮ ಕ್ಯಾಮರಮಾನ್ ಆಗಿ ಶೈಜು ಪಿಲಾತ್ತರ (ಕೈರಳಿ ನ್ಯೂಸ್), ಉತ್ತಮ ಪತ್ರಿಕಾ ವರದಿಗಾರನಾಗಿ ಇ ವಿ ಜಯಕೃಷ್ಣನ್ (ಮಾತೃಭೂಮಿ), ಅತ್ಯುತ್ತಮ ಛಾಯಾಗ್ರಾಹಕನಾಗಿ ಸುರೇಂದ್ರನ್ ಮಡಿಕೈ (ದೇಶಾಭಿಮಾನಿ), ವಿಶೇಷ ಜೂರಿ ಉಲ್ಲೇಖವನ್ನು ಪಡೆದ ಸೂಪ್ಪಿ ವಾಣಿಮೇಲ್ (ತತ್ಸಮಯ ಆನ್‍ಲೈನ್) ಸಮಗ್ರ ಕವರೆಜ್‍ನ ಪ್ರಶಸ್ತಿ ದೇಶಾಭಿಮಾನಿಉ ವಿನೋದ್ ಪಾಯಂ , ಕೈರಳಿ ನ್ಯೂಸಿನುಗಾಗಿ ಸಿಜು ಕಣ್ಣನ್ ಅವರು ಪ್ರಶಸ್ತಿಗಳನ್ನು ಸ್ವೀಕರಿಸಿದರು. ಜಿಲ್ಲಾ ವಾರ್ತಾ ಮತ್ತು ಮಾಹಿತಿ ಇಲಾಖೆ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್, ಎಡಿಎಂ ಎ. ಕೆ ರಮೇಂದ್ರನ್, ಕಾಸರಗೋಡು ಪ್ರೆಸ್ ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ, ಜೂರಿ ಪ್ರತಿನಿಧಿ ವಿ.ವಿ. ಪ್ರಭಾಕರನ್ ಉಪಸ್ಥಿತರಿದ್ದರು. ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂದನನ್ ಸ್ವಾಗತಿಸಿದರು. ಸಹಾಯಕ ಮಾಹಿತಿ ಅಧಿಕಾರಿ ನಿಧೀಶ್ ಬಾಲನ್ ವಂದಿಸಿದರು.