ನವದೆಹಲಿ: ವಕೀಲ ಕೆ.ಕೆ.ವೇಣುಗೋಪಾಲ್ ಅವರು ಮತ್ತೆ ಮೂರು ತಿಂಗಳು ಭಾರತದ ಅಟಾರ್ನಿ ಜನರಲ್ ಆಗಿ ಕಾರ್ಯನಿರ್ವಹಿಸಲು ಒಪ್ಪಿದ್ದಾರೆ.
ನವದೆಹಲಿ: ವಕೀಲ ಕೆ.ಕೆ.ವೇಣುಗೋಪಾಲ್ ಅವರು ಮತ್ತೆ ಮೂರು ತಿಂಗಳು ಭಾರತದ ಅಟಾರ್ನಿ ಜನರಲ್ ಆಗಿ ಕಾರ್ಯನಿರ್ವಹಿಸಲು ಒಪ್ಪಿದ್ದಾರೆ.
'ವೇಣುಗೋಪಾಲ್ ಅವರ ಅಧಿಕಾರಾವಧಿ ಇದೇ 30ರಂದು ಕೊನೆಗೊಳ್ಳಲಿದೆ. ವೈಯಕ್ತಿಕ ಕಾರಣಗಳಿಂದಾಗಿ ಅವರು ಈ ಹುದ್ದೆಯಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದರು.
2017ರ ಜುಲೈನಲ್ಲಿ ಅಟಾರ್ನಿ ಜನರಲ್ ಆಗಿ ವೇಣುಗೋಪಾಲ್ ನೇಮಕಗೊಂಡಿದ್ದರು. ಅವರ ಅವಧಿ 2020ರಲ್ಲಿ ಕೊನೆಗೊಂಡಿತ್ತು. ಅವರ ಮನವಿ ಮೇರೆಗೆ ಕೇಂದ್ರ ಸರ್ಕಾರವು ಒಂದು ವರ್ಷದ ಅವಧಿಗೆ ಅವರನ್ನು ಹುದ್ದೆಯಲ್ಲಿ ಮುಂದುವರಿಸಿತ್ತು. ಬಳಿಕ ಮತ್ತೊಂದು ವರ್ಷದ ಅವಧಿಗೆ ಅವರು ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು.