ಕಾಸರಗೋಡು: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಸಾಮಾಜಿಕ ಪ್ರತಿಬದ್ಧತಾ ನಿಧಿ ಬಳಸಿಕೊಂಡು ಪಾಕ್ಕಮ್ ಜಿ.ಹೆಚ್.ಎಸ್.ಎಸ್.ಎಸ್.ನಲ್ಲಿ 26 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಪಾಕಶಾಲೆಯ ನಿರ್ಮಾಣ ಕಾಮಗಾರಿಯ ಶಿಲಾಫಲಕ ಅನಾವರಣ ಸಮಾರಂಭ ಪಾಕ್ಕಂ ಶಾಲಾ ವಠಾರದಲ್ಲಿ ಜರುಗಿತು. ಗ್ರಾಮೀಣ ಪ್ರದೇಶದಲ್ಲಿ ಪಠ್ಯ ಮತ್ತು ಪಠ್ಯೇತರ ವಿಷಯಗಳಲ್ಲಿ ಅತ್ಯುತ್ತಮವಾಗಿರುವ ಪಾಕಮ್ ಶಾಲೆಯಲ್ಲಿ 72.5 ಚದರ ಅಡಿ ವಿಸ್ತೀರ್ಣದಲ್ಲಿ ಪಾಕಶಾಲೆಯ ನಿರ್ಮಾಣಕ್ಕಾಗಿ ಶಿಲಾನ್ಯಾಸ ಸಮಾರಂಭ ಏರ್ಪಡಿಸಲಾಗಿದೆ.
ಹಿಂದೂಸ್ಥಾನ್ ಐರೋನೋಟಿಕ್ಸ್ ಲಿಮಿಟೆಡ್, ಸಾಮಾಜಿಕ ಪ್ರತಿಬದ್ಧ ನಿಧಿಯನ್ನು ಬಳಸಿಕೊಂಡು ಪಾಕಶಾಲೆ ನಿರ್ಮಾಣವಾಗಲಿದೆ. ಶಾಸಕ ಸಿ.ಎಚ್ ಕುಞಂಬು ಶಿಲಾನ್ಯಾಸದ ಶಿಲಾಫಲಕ ಅನಾವರಣಗೊಳಿಸಿದರು. ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ ರಣವೀರಚಂದ್, ಎಚ್.ಒ.ಡಿ.-ಹೆಚ್.ಎ.ಎಲ್ ಜನರಲ್ ಮ್ಯಾನೇಜರ್ ಸಜಿ ಸೆಬಾಸ್ಟ್ಯನ್, ನಿರ್ಮಿತಿ ಕೇಂದ್ರ ಜನರಲ್ ಮ್ಯಾನೇಜರ್ ಇ.ಪಿ.ರಾಜಮೋಹನ್, ಪಳ್ಳಿಕ್ಕರ ಗ್ರಾಮಪಂಚಾಐಇತಿ ಸದಸ್ಯೆ ಟಿ.ಪಿ.ರಾಧಿಕಾ, ಪಿ.ಟಿ.ಎ. ಅಧ್ಯಕ್ಷ ಟಿ. ಕುಮಾರನ್ ಉಪಸ್ಥಿತರಿದ್ದರು. .ಜಿಲ್ಲಾ ಫೈನಾನ್ಸ್ ಅಧಿಕಾರಿ ಎಂ. ಶಿವಪ್ರಕಾಶ್ ನಾಯರ್ ಸ್ವಾಗತಿಸಿದರು. ಪ್ರಿನ್ಸಿಪಾಲ್ ಇನ್ ಚಾರ್ಜ್ ಪ್ರಿಯೇಶ್ ಕುಮಾರ್ ವಂದಿಸಿದರು.