ತಿರುವನಂತಪುರ: ಯುವಕರಿಗೆ ಅಲ್ಪಾವಧಿಯಲ್ಲಿ ಸೇನಾ ಸೇವೆಗೆ ಅವಕಾಶ ಕಲ್ಪಿಸುವ ಅಗ್ನಿಪಥ ಯೋಜನೆಯನ್ನು ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಒತ್ತಾಯಿಸಿದ್ದಾರೆ. ಯೋಜನೆಯನ್ನು ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಟ್ವಿಟರ್‍ನಲ್ಲಿ ಒತ್ತಾಯಿಸಿದ್ದಾರೆ. ವಿರೋಧದ ಧ್ವನಿಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿರುವರು.
ಅಗ್ನಿಪಥದ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ಯೋಜನೆಯ ಕಡೆಗೆ ಯುವಕರ ಭಾವನೆಯನ್ನು ಸೂಚಿಸುತ್ತವೆ. ದೇಶದ ಹಿತದೃಷ್ಟಿಯಿಂದ ಈ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಪ್ರಧಾನಮಂತ್ರಿಯವರನ್ನು ಕೋರುತ್ತೇವೆ. ಯೋಜನೆ ಕುರಿತು ತಜ್ಞರ ಅಭಿಪ್ರಾಯವನ್ನು ಪ್ರಧಾನಿ ಪರಿಗಣಿಸಬೇಕು. ಯುವಕರ ವಿರೋಧದ ಧ್ವನಿಯನ್ನೂ ಗಣನೆಗೆ ತೆಗೆದುಕೊಳ್ಳಬೇಕು ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿಗಳ ಕನಸಿನ ಯೋಜನೆ ಎಂದು ಬಣ್ಣಿಸುತ್ತಿರುವ ಕೆ-ರೈಲ್ ವಿರುದ್ಧ ರಾಜ್ಯಾದ್ಯಂತ ಸಾರ್ವಜನಿಕರ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಿಎಂ ಇದನ್ನು ಪರಿಗಣಿಸದೆ ಕೆ-ರೈಲ್ ಜಾರಿಗೆ ತರುವಂತೆ ಒತ್ತಾಯಿಸುತ್ತಿದ್ದಾರೆ. ಇದನ್ನು ಮರೆತು ಯುವಕರಿಗೆ ಉತ್ತಮ ಅವಕಾಶ ಕಲ್ಪಿಸುವ ಅಗ್ನಿಪಥ ಯೋಜನೆಯನ್ನು ನಿಲ್ಲಿಸುವಂತೆ ಪ್ರಧಾನಿಗೆ ಮನವಿ ಮಾಡಿರುವುದು ಇಬ್ಬಗೆ ನೀತಿಯನ್ನು ಧ್ವನಿಸಿದೆ.