ತಿರುವನಂತಪುರ: ಸಿಎಂ ಕಾರ್ಯಕ್ರಮ ವರದಿ ಮಾಡಲು ಬಂದಿದ್ದ ಪತ್ರಕರ್ತರು ಧರಿಸಿದ್ದ ಮಾಸ್ಕ್ ಬದಲಾಯಿಸಿರುವುದನ್ನು ಕೇರಳ ಜರ್ನಲಿಸ್ಟ್ ಯೂನಿಯನ್ (ಕೆಜೆಯು) ಖಂಡಿಸಿದೆ. ಯಾವ ಬಣ್ಣದ ಮಾಸ್ಕ್ ಧರಿಸಬೇಕೆಂದು ನಿರ್ಧರಿಸುವುದು ಸಂಪೂರ್ಣವಾಗಿ ವೈಯಕ್ತಿಕ ವಿಷಯವಾಗಿದೆ. ಮಧ್ಯಪ್ರವೇಶಿಸುವ ಹಕ್ಕು ಯಾರಿಗೂ ಇಲ್ಲ ಎಂದು ಕೆಯುಡಬ್ಯ್ಲುಜೆ ಹೇಳಿದೆ.
ಇದನ್ನು ಮಾಧ್ಯಮ ಸ್ವಾತಂತ್ರ್ಯದ ನಿರಾಕರಣೆಯಾಗಿ ಕಾಣಬಹುದು. ಈ ಕ್ರಮವನ್ನು ಯಾರಿಂದಲೂ ಒಪ್ಪಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸೇರಿದಂತೆ ಯಾವುದೇ ಕಾರ್ಯಕ್ರಮವನ್ನು ನಿರ್ಭೀತಿಯಿಂದ ವರದಿ ಮಾಡುವ ಸ್ವಾತಂತ್ರ್ಯವನ್ನು ಪತ್ರಕರ್ತರಿಗೆ ಖಾತ್ರಿಪಡಿಸಬೇಕು ಎಂದು ಕೆಯುಡಬ್ಯ್ಲುಜೆ ಹೇಳಿದೆ.
ಪತ್ರಕರ್ತರ ಮಾಸ್ಕ್ ಬದಲಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೆಡಬ್ಲ್ಯುಜೆ ರಾಜ್ಯಾಧ್ಯಕ್ಷ ಕೆ.ಪಿ.ರೇಜಿ ಹಾಗೂ ಪ್ರಧಾನ ಕಾರ್ಯದರ್ಶಿ ಇ.ಎಸ್.ಸುಭಾಷ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.