ಕಾಸರಗೋಡು: ಕಾಞಂಗಾಡಿನಲ್ಲಿ ಕಾಸರಗೋಡು ಅಭಿವ್ರದ್ಧಿ ಪ್ಯಾಕೇಜ್ ಅನ್ವಯ 52 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಟೌನ್ ಸ್ಕ್ವೆಯರ್ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಹೊಸದುರ್ಗ ಟೌನ್ ಹಾಲ್ ಎದುರುಗಡೆ ಟೌನ್ ಸ್‍ಕ್ವೇಯರ್ ತಲೆಯೆತ್ತಲಿದೆ. ಕಟ್ಟಡದ ಸುತ್ತು ನೆರಳಿನ ಮರಗಳನ್ನು ಬೆಳೆಸಿ ಮತ್ತಷ್ಟು ಸೌಂದರ್ಯ ಹೆಚ್ಚಿಸಲಾಗುತ್ತಿದೆ. ಸಾಂಸ್ಕøತಿಕ, ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸುವ ರೀತಿಯಲ್ಲಿ ಕಟ್ಟಡವನ್ನು ಸಜ್ಜುಗೊಳಿಸಲಾಗುತ್ತಿದೆ. ಓಪನ್ ಸ್ಟೇಜ್, ಪೀಠೋಪಕರಣ, ಕಾಫಿ ಕೆಫೆ ಮುಂತಾದ ಸೌಲಭ್ಯಗಳು ಟೌನ್‍ಸ್ಕ್ವೇರ್‍ನಲ್ಲಿರಲಿದೆ. ಶಾಸಕರ ಅನುದನ ಬಳಸಿ ಹೈಮಾಸ್ಟ್ ಲೈಟ್ ಸ್ಥಾಪಿಸಲಾಗುತ್ತಿದೆ. ಟೌನ್ ಕ್ವೇಯರ್ ತಲೆಯೆತ್ತುವ ಮೂಲಕ ನಗರದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಎದುರಾಗುತ್ತಿದ್ದ ಸಮಸ್ಯೆ ಬಗೆಹರಿಯಲಿದೆ. ಟೌನ್‍ಸ್ಕ್ವೇರ್ ಕಾಂಗಾರಿ ಪೂರ್ತಿಗೊಂಡು ಲೋಕಾರ್ಪಣೆಗೊಳ್ಳುವುದರಿಂದ ಕಾಞಂಗಾಡಿನ ಮುಖಛಾಯೆ ಬದಲಾಗಲಿರುವುದಾಗಿ ಶಾಸಕ ಅವರು ಇ.ಚಂದ್ರಶೇಖರನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.