ತಿರುವನಂತಪುರ: ರಾಜ್ಯದ ಎಲ್ಲಾ ಬಿವರೇಜಸ್ ಮಳಿಗೆಗಳನ್ನು ಸೂಪರ್ ಮಾರ್ಕೆಟ್ ಮಾದರಿಯನ್ನಾಗಿ ಮಾಡಲಾಗುವುದು ಎಂದು ಅಬಕಾರಿ ಸಚಿವ ಎಂ.ವಿ.ಗೋವಿಂದನ್ ಹೇಳಿರುವರು. ಸರದಿ ಸಾಲಿನಿಂದ ಪರದಾಡುವ ಮೂಲಕ ಮದ್ಯ ಖರೀದಿಸುವವರ ಪರಿಸ್ಥಿತಿಯನ್ನು ಬದಲಾಯಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದರು.
ಬಾರ್‌ಗಳ ಬದಲಿಗೆ, ಜನರು ತಮ್ಮ ಆಯ್ಕೆಯ ಮದ್ಯವನ್ನು ಆಯ್ಕೆ ಮಾಡುವ ಔಟ್‌ಲೆಟ್‌ಗಳು ಇರುತ್ತವೆ. ಮದ್ಯದ ಬೆಲೆ ಇಳಿಕೆಗೆ ಕ್ರಮಕೈಗೊಳ್ಳಲಾಗುವುದು ಮತ್ತು ಅಗತ್ಯಬಿದ್ದರೆ ಐಟಿ ಪಾರ್ಕ್ ಗಳಲ್ಲಿ ಬಾರ್ ಲೈಸೆನ್ಸ್ ನೀಡಲಾಗುವುದು ಎಂದು ಅಬಕಾರಿ ಸಚಿವರು ತಿಳಿಸಿರುವರು.