ತಿರುವನಂತಪುರ: ಪ್ರಧಾನಿ ನರೇಂದ್ರ ಮೋದಿ ಅವರ ಕಿರಿಯ ಸಹೋದರ ಪ್ರಹ್ಲಾದ್ ಮೋದಿ ಕೇರಳಕ್ಕೆ ಭೇಟಿ ನೀಡಿದ್ದಾರೆ. ಸ್ನೇಹಿತರೊಬ್ಬರ ಆಹ್ವಾನದ ಮೇರೆಗೆ ಕೇರಳಕ್ಕೆ ಆಗಮಿಸಿದ್ದಾರೆ. ಈ ಮಣ್ಣು ಲಕ್ಷ್ಮಿ ದೇವಿಯ ಸಂಪತ್ತು. ನೋಡಲು ತುಂಬಾ ಸುಂದರವಾಗಿದ್ದು, ಕೇರಳದ ಜನರು ಪ್ರೀತಿಯಿಂದ ಕಾಣುತ್ತಿದ್ದಾರೆ ಎಂದರು. ಕೇರಳಕ್ಕೆ ಪ್ರಹ್ಲಾದ್ ಮೋದಿ ಅವರ ನಾಲ್ಕನೇ ಭೇಟಿ ಇದಾಗಿದೆ. ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಮೂರು ಬಾರಿ ಭೇಟಿ ನೀಡಿದ್ದರು.
ಪ್ರಹ್ಲಾದ ಮೋದಿಯವರ ಮುಂಬೈಯ ಸ್ನೇಹಿತ ಹಾಗೂ ,ಕೊಲ್ಲಂ ತೇವಲಕ್ಕರದ ಪ್ರಮುಖ ಉದ್ಯಮಿ ಅಲೆಕ್ಸಾಂಡರ್ ಪ್ರಿನ್ಸ್ ವೈದ್ಯನ್ ಅವರ ಪುತ್ರಿ ಪ್ರವೀಣಾ ಅವರ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲು ಅವರು ಕೇರಳಕ್ಕೆ ಬಂದಿದ್ದಾರೆ. ನಾಳೆ ಬೆಳಗ್ಗೆ ಕೊಲ್ಲಂನ ಅಷ್ಟಮುಡಿ ರಾವಿಸ್ ರೆಸಾರ್ಟ್‌ನಲ್ಲಿ ನಿಶ್ಚಿತಾರ್ಥ ನಡೆಯಲಿದೆ.
ಪ್ರಧಾನಿ ಹಾಗೂ ಸಹೋದರನಾಗಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಸಹೋದರನ ಆಡಳಿತ ಅಥವಾ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದಿರುವರು.