ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಮುಖ್ಯಮಂತ್ರಿ ವಿರುದ್ಧ ಮಾಡಿರುವ ಅಪಪ್ರಚಾರ ಆಧಾರ ರಹಿತ ಎಂದು ಎಲ್‍ಡಿಎಫ್ ಸಂಚಾಲಕ ಇಪಿ ಜಯರಾಜನ್ ಹೇಳಿದ್ದಾರೆ.
ಇದು ಸರ್ಕಾರ ಮತ್ತು ಎಡ ಪ್ರಜಾಸತ್ತಾತ್ಮಕ ರಂಗವನ್ನು ಕುಗ್ಗಿಸುವ, ಅಪಹಾಸ್ಯಗೊಳಿಸುವ ಷಡ್ಯಂತ್ರದ ಭಾಗವಾಗಿದೆ. ಎಲ್‍ಡಿಎಫ್ ಆಡಳಿತ ಮುಂದುವರಿಯಲಿದ್ದು, ಕಳೆದ ಒಂದು ವರ್ಷದಿಂದ ಜನತೆಗೆ ನೀಡಿದ ಬಹುಪಾಲು ಭರವಸೆಗಳನ್ನು ಈಡೇರಿಸುವಲ್ಲಿ ಸರ್ಕಾರ ಮುಂದಾಗಿದೆ ಎಂದು ಇ.ಪಿ.ಜಯರಾಜನ್ ಹೇಳಿರುವರು.
ಈ ಹಂತದಲ್ಲಿ ಇಂತಹ ಚರ್ಚೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಮುಖ್ಯಮಂತ್ರಿ ವಿರುದ್ಧ ಮತ್ತೆ ಕಟ್ಟುಕಥೆಗಳು ಹೆಣೆಯಲ್ಪಟ್ಟಿದೆ ಎಂದು ಆರೋಪಿಸಿದರು. ಈ ಹಿಂದೆ ನಡೆದ ಷಡ್ಯಂತ್ರದ ಹಿಂದೆ ಇರುವವರನ್ನು ಬೆಳಕಿಗೆ ತರಬೇಕು ಎಂದು ಒತ್ತಾಯಿಸಿದರು.
ರಾಜತಾಂತ್ರಿಕ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎರ್ನಾಕುಳಂ ಜಿಲ್ಲಾ ನ್ಯಾಯಾಲಯದಲ್ಲಿ ರಹಸ್ಯ ಹೇಳಿಕೆ ನೀಡಿದ ಬಳಿಕ ಸಪ್ನಾ ಮುಖ್ಯಮಂತ್ರಿ ಮತ್ತವರ ಕುಟುಂಬದ ಬಗ್ಗೆ ನಿನ್ನೆ ಸ್ವಪ್ನಾ ಗಂಭೀರ ಆರೋಪ ಮಾಡಿದ್ದಳು.
ಮುಖ್ಯಮಂತ್ರಿ, ಅವರ ಪತ್ನಿ ಕಮಲಾ, ಪುತ್ರಿ ವೀಣಾ, ಮುಖ್ಯಮಂತ್ರಿಗಳ ಸಿಎಂ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸಿ.ಎಂ.ರವೀಂದ್ರನ್, ನಳಿನಿ ನೆಟೊ ಹಾಗೂ ಮಾಜಿ ಸಚಿವ ಕೆ.ಟಿ.ಜಲೀಲ್ ಅವರ ಪಾತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ ಎಂದು ಸಪ್ನಾ ಬಹಿರಂಗಪಡಿಸಿದ್ದಳು.