ನವದೆಹಲಿ: ಖ್ಯಾತ ಮಲ್ಟಿ ಮೆಸೇಜಿಂಗ್ ಆ್ಯಪ್ ವಾಟ್ಸಪ್ ಮತ್ತೊಂದು ನೂತನ ಫೀಚರ್ ಅನ್ನು ಹೊರ ತಂದಿದ್ದು ಇನ್ನು ಮುಂದೆ ಗ್ರೂಪ್ ಅಡ್ಮಿನ್ ಯಾವುದೇ ಸಂದೇಶವನ್ನು ಅಳಿಸಿಹಾಕಬಹುದು.
ಹೌದು.. ಮೆಟಾ ಒಡೆತನದ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಷನ್ 'ವಾಟ್ಸ್‌ಆ್ಯಪ್' ಗುಂಪುಗಳಲ್ಲಿ ಅನಗತ್ಯ ಸಂದೇಶಗಳನ್ನು ನಿಯಂತ್ರಿಸಲು ಅಡ್ಮಿನ್‌ಗಳಿಗೆ ಹೆಚ್ಚುವರಿ ಅವಕಾಶ ನೀಡಲಾಗಿದ್ದು, ಗುಂಪುಗಳಲ್ಲಿ ಅನಗತ್ಯ ಸಂದೇಶಗಳನ್ನು ಅಡ್ಮಿನ್ ಅಳಿಸಿ (Delete for Everyone)ಹಾಕಬಹುದು.
ವಾಟ್ಸ್‌ಆ್ಯಪ್‌ನ ಅಪ್ಡೇಟ್‌ಗಳು, ಪ್ರಯೋಗಗಳ ಕುರಿತು ಮಾಹಿತಿ ನೀಡಿರುವ ಡಬ್ಲ್ಯುಎಬೀಟಾಇನ್ಫೊ (WABetaInfo) ಪ್ರಕಾರ, ಈ ನೂತನ ಫೀಚರ್ ನಿಂದಾಗಿ ವಾಟ್ಸಪ್ ಗುಂಪಿನಲ್ಲಿರುವ ಯಾವುದೇ ಸದಸ್ಯ ಗುಂಪಿಗೆ ಕಳುಹಿಸುವ ಸಂದೇಶಗಳ ಮೇಲೆ ಅಡ್ಮಿನ್ ನಿಯಂತ್ರಣ ಸಾಧಿಸಬಹುದಾಗುತ್ತದೆ. ಅಂದರೆ, ಗುಂಪಿಗೆ ಬರುವ ಸಂದೇಶವನ್ನು ಉಳಿಸಿಕೊಳ್ಳಬೇಕೆ ಅಥವಾ ತೆಗೆದು ಹಾಕಬೇಕೆ ಎಂಬುದನ್ನು ಅಡ್ಮಿನ್ ನಿರ್ಧರಿಸಿ ಕ್ರಮ ತೆಗೆದುಕೊಳ್ಳಬಹುದು. ಅಡ್ಮಿನ್ ನಿರ್ದಿಷ್ಟ ಸಂದೇಶವನ್ನು ತೆಗೆದು ಹಾಕಿದರೆ, 'ಈ ಸಂದೇಶವು ಅಡ್ಮಿನ್‌ರಿಂದ ಅಳಿಸಿ ಹಾಕಲ್ಪಟ್ಟಿದೆ' ಎಂದು ಕಾಣಿಸಿಕೊಳ್ಳುತ್ತದೆ.
ವಾಟ್ಸಪ್ ಬೀಟಾ ಆವೃತ್ತಿಯ ಮುಂದಿನ ಅಪ್‌ಡೇಟ್‌ನಲ್ಲಿ ಈ ಆಯ್ಕೆಯು ಸೇರ್ಪಡೆಯಾಗಲಿದೆ. ಮುಂದೆ ಗುಂಪಿನ ಅಡ್ಮಿನ್, ಗುಂಪಿನ ಯಾವುದೇ ಸದಸ್ಯರ ಸಂದೇಶವನ್ನು ಅಳಿಸಿ ಹಾಕುವುದು ಸಾಧ್ಯವಾಗಲಿದೆ. ಈ ಕುರಿತು ಡಬ್ಲ್ಯುಎಬೀಟಾಇನ್ಫೊ ಸ್ಕ್ರೀನ್‌ಶಾಟ್ ಅನ್ನು ಟ್ವೀಟ್ ಮಾಡಿದೆ.
ಇನ್ನು ಇದೇ ರೀತಿಯ ಫೀಚರ್ ಅನ್ನು ವಾಟ್ಸಪ್ ಎದುರಾಳಿ ಸಂಸ್ಥೆ ಟೆಲಿಗ್ರಾಮ್ ನಲ್ಲಿ ಈಗಾಗಲೇ ಇಂತಹುದೇ ಫೀಚರ್ ಅನ್ನು ಪರಿಚಯಿಸಲಾಗಿದೆ.ಅಳಿಸಿಹಾಕಬಹುದು.