ಕೊಚ್ಚಿ: ನಟ ವಿಷ್ಣು ಉ|ಣ್ಣಿಕೃಷ್ಣನ್ ಸುಟ್ಟಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿತ್ರದ ಶೂಟಿಂಗ್ ವೇಳೆ ನಟನಿಗೆ ಅಪಘಾತವಾಗಿದೆ. ಕೈಗಳಲ್ಲಿ ತೀವ್ರ ಸುಟ್ಟಗಾಯಗಳಾಗಿದ್ದು ನಟನನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶೂಟಿಂಗ್ ವೇಳೆ ಸೆಟ್ ನಲ್ಲಿ ಕುದಿಯುವ ಎಣ್ಣೆ ಮಗುಚಿ ಕೈ ಸುಟ್ಟಿದೆ ಎಂದು ತಿಳಿದು ಬಂದಿದೆ. ಆದಷ್ಟು ಬೇಗ ಶಸ್ತ್ರಚಿಕಿತ್ಸೆ ಮಾಡಬೇಕಾಗಿದೆ ಎಂದು ವೈದ್ಯರು ಹೇಳಿದ್ದಾರೆ. ನಟ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
‘ವೆಡಿಕೆಟ್ಟು’ ಸಿನಿಮಾದ ಶೂಟಿಂಗ್ ವೇಳೆ ಈ ಅವಘಡ ಸಂಭವಿಸಿದೆ. ವಿಷ್ಣು ಉಣ್ಣಿಕೃಷ್ಣನ್ ಮತ್ತು ಬಿಬಿನ್ ಜಾರ್ಜ್ ನಿರ್ದೇಶನದ ಮೊದಲ ಚಿತ್ರ 'ವೆಡಿಕೆಟ್ಟು' |ಆಗಿದ್ದು, ನಡೆದಿರುವ ಅಪಘಾತ ಹತಾಶೆಗೆ ಕಾರಣವಾಗಿದೆ.