ಎರ್ನಾಕುಳಂ: ಡಾಲರ್ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಪ್ನಾ ಸುರೇಶ್ ನೀಡಿರುವ ಗೌಪ್ಯ ಹೇಳಿಕೆಯ ಪ್ರತಿಯನ್ನು ಕೋರಿ ಸರಿತಾ ಎಸ್ ನಾಯರ್ ಮತ್ತೆ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಈ ವೇಳೆ ಹೇಳಿಕೆಯ ಪ್ರತಿ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದಕ್ಕೂ ಮುನ್ನ ಎರ್ನಾಕುಳಂ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅಫಿಡವಿಟ್ ಪ್ರತಿಯನ್ನು ಕೋರಿ ಸರಿತಾ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಗೌಪ್ಯ ಹೇಳಿಕೆಯಲ್ಲಿ ತನ್ನ ಬಗ್ಗೆ ಉಲ್ಲೇಖವಿದೆ ಎಂದು ಆರೋಪಿಸಿ ಸರಿತಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ಗೌಪ್ಯ ಹೇಳಿಕೆಯನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅರ್ಜಿಯ ಬಗ್ಗೆ ನ್ಯಾಯಾಲಯವು ವಿರೋಧ ಪಕ್ಷಗಳ ಅಭಿಪ್ರಾಯವನ್ನೂ ಕೇಳಿದೆ. ಅರ್ಜಿಯನ್ನು ಮುಂದಿನ ಮಂಗಳವಾರ ಮತ್ತೆ ಪರಿಗಣಿಸಲಾಗುವುದು.
ತಪೆÇ್ಪಪ್ಪಿಗೆ ಸಾರ್ವಜನಿಕ ದಾಖಲೆಯಲ್ಲ ಎಂದು ತಿಳಿಸಿದ ಕೆಳ ನ್ಯಾಯಾಲಯವೂ ಅರ್ಜಿಯನ್ನು ವಜಾಗೊಳಿಸಿದೆ.