ಕಾಸರಗೋಡು: ಕೇರಳ ವಿಧಾನಸಭೆಯ ಅಧಿಕೃತ ವಿಧೇಯಕಗಳು ಮತ್ತು ನಿರ್ಣಯಗಳ ಸಮಿತಿಯು ಮಧ್ಯಾಹ್ನದ ಊಟದ ವಿತರಣೆಯ ಗುಣಮಟ್ಟವನ್ನು ಪರಿಶೀಲಿಸಲು ಚೆರ್ಕಳ ಸೆಂಟ್ರಲ್ ಗೌ.ಹಯರ್ ಸೆಕೆಂಡರಿ ಶಾಲೆಯಲ್ಲಿ ತಪಾಸಣೆ ನಡೆಸಿತು. ಪೂರ್ವ ಪ್ರಾಥಮಿಕದಿಂದ ಪ್ರೌಢ ವಿದ್ಯಾರ್ಥಿಗಳವರೆಗೆ ನೀಡುತ್ತಿರುವ ಆಹಾರವನ್ನು ಪರಿಶೀಲಿಸಲಾಯಿತು. ಪಾಕ ಶಾಳೆಗೆ ಭೇಟಿ ನೀಡಿ ಸಿಬ್ಬಂದಿ ಹಾಗೂ ಶಿಕ್ಷಕರೊಂದಿಗೆ ಸಮಿತಿ ಸದಸ್ಯರು ಸಮಾಲೋಚನೆ ನಡೆಸಿದರು.
ಸಮಿತಿ ಅಧ್ಯಕ್ಷ ಶಾಸಕ ಪ್ರಮೋದ್ ನಾರಾಯಣ ನೇತೃತ್ವದಲ್ಲಿ ಪರಿಶೀಲನೆ ನಡೆಯಿತು. ಕುಂಭು. ಕೆ ಪ್ರೇಮಕುಮಾರ್, ಕುರುಕ್ಕೋಳಿ ಮೊಯ್ದೀನ್ ಜತೆಗಿದ್ದರು. ಶಾಸಕ ಎನ್.ಎ.ನೆಲ್ಲಿಕುನ್ನು ಸಮಿತಿಯೊಂದಿಗೆ ಶಾಲೆಗೆ ಭೇಟಿ ನೀಡಿದರು. ಚೆರುವತ್ತೂರಿನಲ್ಲಿ ಶವರ್ಮಾ ಸೇವಿಸಿ ವಿದ್ಯಾರ್ಥಿನಿ ಮೃತಪಟ್ಟ ಹಿನ್ನೆಲೆಯಲ್ಲಿ ವಿಧಾನಸಭೆ ಸಮಿತಿಯ ಮೊದಲ ವಿಚಾರಣೆ ಕಾಸರಗೋಡಿನಲ್ಲಿ ನಡೆದಿದೆ. ಚೆರ್ಕಳ ಸೆಂಟ್ರಲ್ ಸ್ಕೂಲ್ ನಲ್ಲಿ ಅಧಿಕಾರಿಗಳಿಂದ ಸಾಕ್ಷ್ಯ ಪಡೆದು ಸಮಿತಿ ಮಿಂಚಿನ ತಪಾಸಣೆ ನಡೆಸಿತು.