ಕೊಚ್ಚಿ: ನಟಿಗೆ ಹಲ್ಲೆ ನಡೆಸಿದ ಪ್ರಕರಣದ ಮುಂದುವರಿದ ತನಿಖೆಗೆ ಸಂಬಂಧಿಸಿದಂತೆ ನಟಿ ಕಾವ್ಯಾ ಮಾಧವನ್ ಅವರ ಪೋಷಕರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಕಾವ್ಯಾಳ ತಂದೆ ಮಾಧವನ್, ತಾಯಿ ಶ್ಯಾಮಲಾ ಹಾಗೂ ದಿಲೀಪ್ ಸಹೋದರಿ ಸಬಿತಾ ಹೇಳಿಕೆಯನ್ನು ಪಡೆಯಲಾಗಿದೆ. ಡಿವೈಎಸ್ಪಿ ಬೈಜು ಪೌಲ್ ನೇತೃತ್ವದ ತಂಡ ಆಲುವಾದಲ್ಲಿರುವ ಪದ್ಮಸರೋವರದ ಮನೆಯಲ್ಲಿ ಈ ಹೇಳಿಕೆ ದಾಖಲಿಸಿತು.
ನಿರ್ದೇಶಕ ಬಾಲಚಂದ್ರ ಕುಮಾರ್ ಕರೆ ಮಾಡಿದ್ದ ನಂಬರ್ ಬಳಸಿಲ್ಲ ಎಂಬ ಕಾವ್ಯಾ ಮಾಧವನ್ ಹೇಳಿಕೆ ಸುಳ್ಳು ಎಂದು ಕ್ರೈಂ ಬ್ರಾಂಚ್ ಹೈಕೋರ್ಟ್ ಗೆ ತಿಳಿಸಿತ್ತು. ಈ ಸಿಮ್ ಕಾರ್ಡ್ ಕಾವ್ಯಾಳ ತಾಯಿ ಶ್ಯಾಮಲಾ ಮಾಧವನ್ ಹೆಸರಿನಲ್ಲಿದೆ. ತನಿಖಾ ತಂಡ ವಿವರಣೆ ಕೇಳಿದೆ. ಇದಕ್ಕೂ ಮುನ್ನ ಕಾವ್ಯ ತಾನು ಈ ನಂಬರ್ ಬಳಸಿಲ್ಲ ಎಂದು ಹೇಳಿದ್ದರು.
ಆದರೆ, ಕಾವ್ಯಾ ದಿಲೀಪ್ ಜೊತೆ ವಿವಾಹವಾಗುವುದಕ್ಕೂ ಮುನ್ನ ಈ ನಂಬರ್ ಬಳಸಿ ದಿಲೀಪ್ ಗೆ ಕರೆ ಮಾಡಿದ್ದನ್ನು ಅಪರಾಧ ವಿಭಾಗದ ಪೊಲೀಸರು ಪತ್ತೆ ಹಚ್ಚಿದ್ದಾರೆ. ನಟಿಯ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಕಾವ್ಯಾ ಪಣಂಪಳ್ಳಿನಗರದ ಖಾಸಗಿ ಬ್ಯಾಂಕ್‌ನಲ್ಲಿ ಖಾತೆ ಮತ್ತು ಲಾಕರ್ ಹೊಂದಿದ್ದರು. ತನಿಖಾ ತಂಡದ ಪ್ರಕಾರ ಕಾವ್ಯಾ ತನ್ನ ತಂದೆ ಮಾಧವನ್ ನೆರವಿನಿಂದ ಬ್ಯಾಂಕ್ ವಹಿವಾಟು ನಡೆಸುತ್ತಿದ್ದಳು. ಇದರ ಆಧಾರದ ಮೇಲೆ ಅವರನ್ನು ಸಂದರ್ಶಿಸಲಾಯಿತು.