ಬದಿಯಡ್ಕ: ಕೇರಳ ಗ್ರಾಮೀಣ ಬ್ಯಾಂಕ್ ಬದಿಯಡ್ಕ ಶಾಖೆಯ ಪ್ರಬಂಧಕ ಸುಬ್ರಹ್ಮಣ್ಯ ಎ. ಅವರು ಸೇವೆಯಿಂದ ನಿವೃತ್ತರಾದರು. ಗ್ರಾಮೀಣ ಭಾಗದ ಜನತೆಗೆ 37 ವರ್ಷಗಳ ಸಾರ್ಥಕ ಸೇವೆಯನ್ನು ನೀಡಿ ಜನಾನುರಾಗಿಯಾಗಿದ್ದರು. ಬದಿಯಡ್ಕ ಶಾಖೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಇವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.
ಕೇರಳ ಗ್ರಾಮೀಣ ಬ್ಯಾಂಕ್‍ನ ನಿವೃತ್ತ ಪ್ರಬಂಧಕ ದೇವದಾಸ್ ಕಾಮತ್ ಮಾತನಾಡಿ ಸುಬ್ರಹ್ಮಣ್ಯರ ಕಾರ್ಯದಕ್ಷತೆ ಹಾಗೂ ಗ್ರಾಹಕರೊಂದಿಗೆ ಆತ್ಮೀಯವಾಗಿ ಬೆರೆಯುವ ಕಾರ್ಯಶೈಲಿಯ ಕುರಿತು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಈಶ್ವರ ರಾವ್ ಮೈಲ್ತೊಟ್ಟಿ, ಶಿವರಾಮ ಭಟ್, ವೆಂಕಟೇಶ ಹಾಗೂ ಗ್ರಾಹಕರ ಪರವಾಗಿ ರಾಮಚಂದ್ರ ಚೆಟ್ಟಿಯಾರ್ ಬದಿಯಡ್ಕ ಮಾತನಾಡಿದರು. ಬ್ಯಾಂಕ್‍ನ ಗ್ರಾಹಕರು, ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಸುಬ್ರಹ್ಮಣ್ಯ ಎ. ಅವರು ಮಾತನಾಡಿ ತಮ್ಮ ಸಹೋದ್ಯೋಗಿಗಳ ಸಹಕಾರವನ್ನು ಸ್ಮರಿಸುತ್ತಾ ಗ್ರಾಹಕರೊಂದಿಗಿನ ತನ್ನ ಒಡನಾಟವನ್ನು ಹಂಚಿಕೊಂಡರು. ಬದಿಯಡ್ಕ ಶಾಖೆಯ ನೂತನ ಪ್ರಬಂಧಕ ಈಶ್ವರ.ಕೆ. ಕಾರ್ಯಕ್ರಮ ನಿರೂಪಿಸಿದರು. ಶಾಖೆಯ ಉಪ ಪ್ರಬಂದಕರುಗಳಾದ ಮೃದುಲಾ ಕೆ.ಕೆ. ಸ್ವಾಗತಿಸಿ, ಅನ್ವಿಂದ್ ಸುರೇಂದ್ರ ವಂದಿಸಿದರು.