ಬದಿಯಡ್ಕ: ಕೇಂದ್ರ ತನಿಖಾ ಸಂಸ್ಥೆಯನ್ನು ದುರುಪಯೋಗಪಡಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸುಳ್ಳು ಕೇಸಿನಲ್ಲಿ ಸಿಲುಕಿಸುವ ಕೇಂದ್ರ ಸರ್ಕಾರದ ಫ್ಯಾಸಿಸ್ಟ್ ಧೋರಣೆ ಎದುರಾಗಿ ಬದಿಯಡ್ಕ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ಬದಿಯಡ್ಕ ಅಂಚೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಮಾರ್ಚ್ ಹಾಗೂ ಧರಣಿ ಜರಗಿತು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಎಂ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನೇತಾರ ಪಿಜಿ ಚಂದ್ರಹಾಸ ರೈ, ಶ್ಯಾಮ್ ಪ್ರಸಾದ್ ಮಾನ್ಯ ಖಾದರ್ ಮಾನ್ಯ, ಉಪಾಧ್ಯಕ್ಷ ಅಬ್ಬಾಸ್, ಗಂಗಾಧರ ಗೊಳಿಯಡ್ಕ, ಶಾಫಿ ಗೊಳಿಯಡ್ಕ, ಚಂದ್ರಹಾಸ ಮಾಸ್ತರ್ ಮಾತನಾಡಿದರು. ಮ್ಯಾಥ್ಯೂಸ್ ಬದಿಯಡ್ಕ, ಬದಿಯಡ್ಕ ಮಂಡಲ ಯೂತ್ ಕಾಂಗ್ರೆಸ್ ಅಧ್ಯಕ್ಷ ಐತಪ್ಪ ಪಟ್ಟಾಜೆ, ಜಯಪ್ರಕಾಶ್, ಐಎನ್.ಟಿ.ಯು.ಸಿನೇತಾರ ರಾಮಕೃಷ್ಣ ವಿದ್ಯಾಗಿರಿ, ಕುಮಾರ್ ನಾಯರ್, ಶಾಫಿ ಗೊಳ್ಯಡಿ, ಅಜಿತ್ ನೀರ್ಚಾಲು, ಶಿಜು, ಯೂತ್ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ನೇತೃತ್ವ ನೀಡಿದರು.