ಕೊಚ್ಚಿ; ಚಿನ್ನ ಕಳ್ಳಸಾಗಣೆ ಆರೋಪಿ ಸ್ವಪ್ನಾ ಸುರೇಶ್‍ಗೆ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಆರ್ಥಿಕ ಅಪರಾಧಗಳ ತನಿಖೆ ನಡೆಸುವ ಏಕೈಕ ಸಂಸ್ಥೆ ಇಡಿ. ಭದ್ರತೆಯ ಅಗತ್ಯವಿರುವವರು ರಾಜ್ಯ ಪೋಲೀಸರನ್ನು ಸಂಪರ್ಕಿಸಬೇಕು ಎಂದು ಇಡಿ ಹೇಳಿದೆ. ಎರ್ನಾಕುಳಂ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್‍ನಲ್ಲಿ ಈ ವಿಷಯ ತಿಳಿಸಲಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕುಟುಂಬದ ವಿರುದ್ಧ ಬಹಿರಂಗಪಡಿಸಿದ ಗೌಪ್ಯಗಳ ಬೆನ್ನಲ್ಲೇ, ಸ್ವಪ್ನಾ ಸುರೇಶ್ ಅವರಿಗೆ ಜೀವ ಬೆದರಿಕೆ ಇರುವುದರಿಂದ ವಿಶೇಷ ಭದ್ರತೆಯ ಅಗತ್ಯವಿದೆ ಎಂದು ಹೇಳಿದ್ದರು. ಕೇಂದ್ರೀಯ ಸಂಸ್ಥೆಗಳ ಭದ್ರತೆ ಕೋರಿ ಆಕೆ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅದು ಸಾಧ್ಯವಿಲ್ಲ ಎಂದು ಇಡಿ ಹೇಳಿದೆ. ಭದ್ರತೆ ಅಗತ್ಯವಿದ್ದಾಗ, ಇಡಿ ರಾಜ್ಯ ಪೆÇಲೀಸರನ್ನು ಸಂಪರ್ಕಿಸುತ್ತದೆ. ಕೇಂದ್ರ ಸರ್ಕಾರವು ಈ ಬಗ್ಗೆ ಜವಾಬ್ದಾರವಲ್ಲದ ಕಾರಣ ಕೇಂದ್ರ ಭದ್ರತೆ ಸಾಧ್ಯವಿಲ್ಲ ಎಂದು ಇಡಿ ಹೇಳಿದೆ. ಇದೇ ವೇಳೆ ಸ್ವಪ್ನಾ ಪರ ವಕೀಲರು ಕೇಂದ್ರದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಸ್ವಪ್ನಾ ಇಂದು ಇಡಿ ಮುಂದೆ ಹಾಜರಾಗಿರಲಿಲ್ಲ. ಮಗುವಿನ ಆರೋಗ್ಯ ಸಮಸ್ಯೆಯ ಕಾರಣ ನೀಡಿ ಇನ್ನೊಂದು ದಿನ ಹಾಜರಾಗುವುದಾಗಿ ಸಪ್ನಾ ಇಡಿಗೆ ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ ಮೇಲಧಿಕಾರಿಗಳ ವಿರುದ್ಧ ನೀಡಿದ ಗೌಪ್ಯ ಹೇಳಿಕೆಯ ಆಧಾರದ ಮೇಲೆ ಹೆಚ್ಚಿನ ವಿಚಾರಣೆಗೆ ಇಡಿ ಸ್ವಪ್ನಾ ಅವರನ್ನು ವಿಚಾರಣೆ ನಡೆಸುತ್ತಿದೆ.