ಉಪ್ಪಳ: ಮನಸ್ಸಿನಲ್ಲಿರುವ ಕಲ್ಮಶಗಳನ್ನು ತೊಳೆದು ಸದ್ವಿಚಾರಗಳನ್ನು ತಿಳಿಸಿ ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವಲ್ಲಿ ಮತ್ತು ಸುಸಂಸ್ಕøತರನ್ನಾಗಿಸುವಲ್ಲಿ ಗುರುವಿನ ಪಾತ್ರ ಮಹತ್ತರವಾದುದು ಎಂದುಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮಿಜಿ ತಿಳಿಸಿದರು.
ಅವರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಜರಗಿದ ವ್ಯಕ್ತಿತ್ವ ವಿಕಸನ ಶಿಬಿರದ ಇತ್ತೀಚೆಗೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಆಶಿರ್ವದಿಸಿದರು. ನಮ್ಮಲ್ಲಿರುವ ಸಜ್ಜನಿಕೆಯನ್ನುಜಾಗ್ರತಗೊಳಿಸುವಲ್ಲಿ ಆ ಮೂಲಕ ಭಾರತೀಯತೆಯನ್ನುಉಳಿಸುವಲ್ಲಿಪ್ರಶಾಂತಿ ವಿದ್ಯಾಕೇಂದ್ರಮಹತ್ತರ ಪಾತ್ರವಹಿಸುತ್ತಿದೆ ಎಂದು ಹೇಳಿದರು. ಕಾಸರಗೋಡು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಉಪಾಧ್ಯಕ್ಷ ಪೆಲತ್ತಡ್ಕರಾಮಕೃಷ್ಣ ಭಟ್, ಟ್ರಸ್ಟಿ ಪಿ. ಸದಾಶಿವ ಭಟ್, ವಾರ್ಡನ್ ಕೃಷ್ಣ ನಾಯಕ್ ಹಾಗೂ ಉಪಸ್ಥಿತರಿದ್ದರು. ಮ್ಯಾನೇಜಿಂಗ್ ಟ್ರಸ್ಟಿ ಹೆಚ್ ಮಹಾಲಿಂಗ ಭಟ್ ಸ್ವಾಗತಿಸಿದರು. ಶಾಲಾ ಶಿಕ್ಷಕರಾದ ಶ್ರೀಕಾಂತ ಎಸ್. ಕಾರ್ಯಕ್ರಮ ನಿರೂಪಿಸಿದರು ಶಾಲಾ ಪ್ರಾಂಶುಪಾಲರಾದ ಅನೂಪ್ ಕೆ ವಂದಿಸಿದರು. ಎರಡು ದಿವಸಗಳ ಶಿಬಿರ ಆಯೋಜಿಸಲಾಗಿತ್ತು.