ಕುಂಬಳೆ: ಶ್ರೀರಾಮ ಕಥಾ ಸತ್ಸಂಗ ಸಮಿತಿ ಕೃಷ್ಣ ನಗರ ಕುಂಬಳೆ ಇದರ ನೇತೃತ್ವದಲ್ಲಿ ಶ್ರೀರಾಮ ಕಥಾ ಸತ್ಸಂಗ ಹಾಗೂ ಶ್ರೀರಾಮನಾಮ ಜಪ ಧ್ಯಾನ ಕಾರ್ಯಕ್ರಮ ಜು.17 ರಿಂದ 23ರ ವರೆಗೆ ಕುಂಬಳೆ ಕೃಷ್ಣ ನಗರ ಮೌನೇಶ ಮಂದಿರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಜು.17 ರಂದು ಅಪರಾಹ್ನ 3 ಕ್ಕೆ ಕಣಿಪುರ ಶ್ರೀಗೋಪಾಲಕೃಷ್ಣ ದೇವಸ್ಥಾನದಿಂದ ಕೃಷ್ಣ ನಗರ ಮೌನೇಶ ಮಂದಿರದ ವರೆಗೆ ಶ್ರೀರಾಮ ದೇವರ ವಿಗ್ರಹ ತರಲಾಗುವುದು. 4.30 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ರಘುನಾಥ ಪೈ, ಶಿವರಾಮ ಬೀಚ್ ರೋಡ್, ಸಜೇಶ್ ಪೊದುವಾಳ್, ಡಾ.ಕಿಶೋರ್ ಕುಮಾರ್, ಸದಾನಂದ ಕಾಮತ್, ಎಂ.ನಾ.ಚಂಬಲ್ತಿಮಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಸಂಜೆ 5.45 ಕ್ಕೆ ಭಜನೆ, 6.30 ಕ್ಕೆ ಶ್ರೀರಾಮ ಕಥಾ ಸತ್ಸಂಗ, ರಾತ್ರಿ 8 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಜು.23 ರಂದು ಸಂಜೆ 5 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ವೇದಮೂರ್ತಿ ಚಕ್ರಪಾಣಿದೇವ ಪೂಜಿತ್ತಾಯ, ಜಿತೇಂದ್ರ ಪ್ರತಾಪನಗರ, ಕಲಾರತ್ನ ಶಂ.ನಾ.ಅಡಿಗ ಕುಂಬಳೆ, ಡಾ.ಡಿ.ಪುರುಷೋತ್ತಮ ಭಟ್, ವಿಠಲ ಆಚಾರ್ಯ, ನಾಗೇಶ್ ಕಾರ್ಲೆ ಉಪಸ್ಥಿತರಿರುವರು.