ಕಾಸರಗೋಡು: ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆಗೆ ಆಗ್ರಹಿಸಿ ಮುಸ್ಲಿಂ ಯುವ ಸಂಘಟನೆ ರಾಜ್ಯಾದ್ಯಂತ ನಡೆಸುತ್ತಿರುವ ಪ್ರತಿಭಟನಾ ಅಭಿಯಾನದ ಅಂಗವಾಗಿ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಪೆÇಲೀಸ್ ಕೇಂದ್ರ ಕಚೇರಿಯಲ್ಲಿ ಲುಕ್‍ಔಟ್ ನೋಟಿಸ್ ಜಾರಿಗೊಳಿಸುವ ಪ್ರತಿಭಟನೆ ಶನಿವಾರ ನಡೆಯಿತು.
ವಿದ್ಯಾನಗರ ಸರ್ಕಾರಿ ಕಾಲೇಜು ವಠಾರದಿಂದ ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾಕಾರರು ಜಿಲ್ಲಾ ಪೆÇಲೀಸ್ ಕೇಂದ್ರ ಕಚೇರಿ ವಠಾರಕ್ಕೆ ತಲುಪಿ, ಲುಕ್‍ಔಟ್ ನೋಟಿಸ್ ಲಗತ್ತಿಸುವ ಮೂಲಕ ಪ್ರತಿಭಟನಾ ಅಭಿಯಾನ ನಡೆಸಿದರು. ಈ ಸಂದರ್ಭ ಪ್ರತಿಭಟನಾಕಾರರನ್ನು ಪೊಲೀಸರು ತಡೆದಾಗ ಕಾರ್ಯಕರ್ತರು ತಡೆಗೋಡೆ ಭೇದಿಸಿ ಮುನ್ನುಗ್ಗಲು ಯತ್ನಿಸಿದರು. ಸಂಘಟನೆ ರಾಜ್ಯ ಉಪಾಧ್ಯಕ್ಷ ಅಶ್ರಫ್ ಎಡನೀರ್ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ಅಝೀಝ್ ಕಳತ್ತೂರು ಅಧ್ಯಕ್ಷತೆ ವಹಿಸಿದ್ದರು.ಪ್ರಧಾನ ಕಾರ್ಯದರ್ಶಿ ಜಹೀರ್ ಆಸಿಫ್ ಸ್ವಾಗತಿಸಿದರು. ಶಾನವಾಜ್, ಎಂ.ಎ.ನಜೀಬ್, ಶಂಸುದ್ದೀನ್ ಅವಿಯಿಲ್, ಹಾರಿಸ್ ಅಂಕಕಲಾರಿ, ಬಾತಾ ಪೆÇವೆಲ್, ರಹಮಾನ್ ಗೋಲ್ಡನ್, ರಫೀಕ್ ಕೇಳೋಟ್, ಎಂ.ಪಿ.ನೌಷಾದ್, ಹಾರಿಸ್ ಚೂರಿ, ಎಂ.ಪಿ.ಖಾಲೀದ್, ಸಿದ್ದೀಕ್ ಸಂತೋಷ್ ನಗರ, ರವೂಫ್ ಬಾವಿಕ್ಕರ, ಟಿ.ಎಸ್.ನಜೀಬ್, ಖಾದರ್ ರಮೀಝ್ ಆರಂಗಡಿ, ಅನಸ್ ಎತ್ತರಿತೋಡು ಉಪಸ್ಥಿತರಿದ್ದರು.