ತಿರುವನಂತಪುರ: ಟ್ಯಾಂಕರ್ ಲಾರಿಗೆ ಕಾರು ಡಿಕ್ಕಿ ಹೊಡೆದು ಪುತ್ರನೊಂದಿಗೆ ಸಾವನ್ನಪ್ಪಿದ ನೆಡುಮಾಂಗಾಡ್ ನಿವಾಸಿ ಪ್ರಕಾಶ್ ದೇವರಾಜನ್ ಎಂಬವರ ಆತ್ಮಹತ್ಯೆ ಪತ್ರ ಸಿಕ್ಕಿದೆ. ಪ್ರಕಾಶ್ ದೇವರಾಜ್ ಅವರ ಆತ್ಮಹತ್ಯೆ ಪತ್ರಪ ಫೇಸ್ ಬುಕ್ ಪೋಸ್ಟ್ ನಂತೆಯೇ ಇದೆ.
ತಂದೆ ಹಾಗೂ ಸಹೋದರನನ್ನು ಕ್ಷಮಿಸು ಮಗಳೇ ಎಂದು ಪುತ್ರಿ ಕಾವ್ಯಾಳಲ್ಲಿ ಕ್ಷಮೆ ಕೇಳುವ ಮೂಲಕ ಪ್ರಕಾಶ್ ದೇವರಾಜನ್ ಅವರ ಪೋಸ್ಟ್ ಆರಂಭವಾಗುತ್ತದೆ.
ಮಗಳು ಕಾವ್ಯಾ ಎಸ್ ದೇವ್ ಅವರಿಗೆ ಶುಭ ಹಾರೈಸುತ್ತೇನೆ ಎಂದು ಪ್ರಕಾಶ್ ಪತ್ರದಲ್ಲಿ ತಿಳಿಸಿದ್ದಾರೆ. ತನ್ನ ಸಾವಿಗೆ ಪತ್ನಿ ಶಿವಕಲಾ ಮತ್ತು ಅವರ ಸ್ನೇಹಿತರಾದ ವಿಳಪಿಲಶಾಲದ ಅನೀಶ್, ದುಬೈನಲ್ಲಿ ಕೆಲಸ ಮಾಡುವ ಮಲಪ್ಪುರಂನ ಉಣ್ಣಿ, ಬಹ್ರೇನ್‌ನಲ್ಲಿ ನೃತ್ಯ ಶಾಲೆ ನಡೆಸುತ್ತಿರುವ ಮುನೀರ್ ಮತ್ತು ಅನೀಶ್ ಅವರ ತಾಯಿ ಪ್ರಸನ್ನ ಕಾರಣ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಪತ್ನಿ, ಸಹಿತ ನಾಲ್ವರು ಸೇರಿ ತನಗೆ ಹಾಗೂ ಮಕ್ಕಳಿಗೆ ಮಾನಸಿಕ ಹಾಗೂ ಆರ್ಥಿಕವಾಗಿ ಕಿರುಕುಳ ನೀಡಿ ಲಕ್ಷಾಂತರ ರೂಪಾಯಿ ಸಾಲ ಮಾಡಿಸಿದ್ದಾರೆ ಎಂದು ಪ್ರಕಾಶ್ ಪತ್ರದಲ್ಲಿ ತಿಳಿಸಿದ್ದಾರೆ. ಅವರ ವಿರುದ್ಧ ಯಾವ ಕಾನೂನು ಕ್ರಮ ಕೈಗೊಳ್ಳಬಹುದು ಎಂಬುದು ನನಗೆ ತಿಳಿದಿಲ್ಲ, ಆದರೆ ಕಾನೂನು ಮತ್ತು ಸುವ್ಯವಸ್ಥೆ ವ್ಯವಸ್ಥೆಯು ಅವರಿಗೆ ತಕ್ಕ ಶಿಕ್ಷೆಯನ್ನು ನೀಡುತ್ತದೆ ಎಂದು ತಾನು ಮತ್ತು ಪುತ್ರ ನಂಬಿದ್ದೇವೆ ಎಂದು ಪ್ರಕಾಶ್ ಹೇಳುತ್ತಾರೆ.
ಅಟ್ಟಿಂಗಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ನೆಡುಮಂಗಡದ ನೆಲ್ಲಂಬಕೋಣಂ ಮೂಲದ ಪ್ರಕಾಶ್ ದೇವರಾಜ್ ಮತ್ತು ಅವರ 12 ವರ್ಷದ ಪುತ್ರ ಶಿವದೇವ್ ಸಾವನ್ನಪ್ಪಿದ್ದಾರೆ. ಕೊಲ್ಲಂನಿಂದ ತಿರುವನಂತಪುರದತ್ತ ತೆರಳುತ್ತಿದ್ದ ಟ್ಯಾಂಕರ್ ಲಾರಿಗೆ ಆಲ್ಟೋ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿತ್ತು.