ಕಾಸರಗೋಡು: ವಿಧಾನ ಪರಿಷತ್ ವಿರೋಧಪಕ್ಷದ ಮುಖ್ಯ ಸಚೇತಕ ಪ್ರಕಾಶ್ ಕೆ. ರಾಥೋಡ ಅವರು ಜುಲೈ 1ರಂದು ಕಾಸರಗೋಡು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಗ್ಗೆ 9ಕ್ಕೆ ಕುಂಬಳೆ ಸನಿಹದ ನಾಯಾರಯಣಮಂಗಲ ಎಲ್‍ಪಿ ಶಾಲೆಯಲ್ಲಿ ನಡೆಯುವ ಪುಸ್ತಕಗಳ ಉಚಿತ ವಿತರಣಾ ಸಮಾರಂಭ ಉದ್ಘಾಟಿಸುವರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ವಿಶಾಲಾಕ್ಷಿ ಅಧ್ಯಕ್ಷತೆ ವಹಿಸುವರು.
11ಕ್ಕೆ ಮುಳ್ಳೇರಿಯದ ಗಣೇಶ ಕಲಾ ಮಂದಿರದಲ್ಲಿ ಜರುಗಲಿರುವ ಕನ್ನಡ ಪತ್ರಿಕಾ ದಿನಾಚರಣೆ, ಚಿಣ್ಣರ ಕಲರವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಸಂಜೆ 6,50ಕ್ಕೆ ಮಂಗಳೂರು ವಿಮಾಣ ನಿಲ್ದಾಣ ಮೂಲಕ ಬೆಂಗಳೂರಿಗೆ ನಿರ್ಗಮಿಸುವರು.