ಲಖನೌ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತಾರೂಢ ಪಕ್ಷ ಮತ್ತು ವಿರೋಧ ಪಕ್ಷಗಳ ಮಧ್ಯೆ ಸಿದ್ಧಾಂತದ ಭಿನ್ನತೆ ಇರಬಹುದು. ಆದರೆ, ಅವರಲ್ಲಿ ಬದ್ಧ ವೈರತ್ವ ಇರಬಾರದು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಪಾದಿಸಿದ್ದಾರೆ.
ಲಖನೌ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತಾರೂಢ ಪಕ್ಷ ಮತ್ತು ವಿರೋಧ ಪಕ್ಷಗಳ ಮಧ್ಯೆ ಸಿದ್ಧಾಂತದ ಭಿನ್ನತೆ ಇರಬಹುದು. ಆದರೆ, ಅವರಲ್ಲಿ ಬದ್ಧ ವೈರತ್ವ ಇರಬಾರದು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಪಾದಿಸಿದ್ದಾರೆ.
ಕೋವಿಂದ್ ಅವರು ಉತ್ತರ ಪ್ರದೇಶದ ವಿಧಾನಪರಿಷತ್ ಮತ್ತು ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಸೋಮವಾರ ಭಾಷಣ ಮಾಡಿದರು.
ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ಮಧ್ಯೆ ಉತ್ತಮ ಸೌಹಾರ್ದತೆಗೆ ಉತ್ತರ ಪ್ರದೇಶದ ವಿಧಾನಪರಿಷತ್ ವೈಭವದ ಇತಿಹಾಸವನ್ನು ಹೊಂದಿದೆ. ಕೆಲವು ಸಂದರ್ಭಗಳಲ್ಲಿ ಇಂಥ ಶ್ರೀಮಂತ ಸಂಪ್ರದಾಯಕ್ಕೆ ಧಕ್ಕೆಯಾಗುವ ಘಟನೆಗಳು ನಡೆಯುತ್ತವೆ. ಆದರೆ, ಇಂಥ ಘಟನೆಗಳನ್ನು ಮರೆಯಬೇಕು ಎಂದು ಶಾಸಕರಿಗೆ ಕಿವಿಮಾತು ಹೇಳಿದರು.
ಉತ್ತರ ಪ್ರದೇಶದ ಶ್ರೀಮಂತ ರಾಜಕೀಯ ಸಂಪ್ರದಾಯವನ್ನು ಎಲ್ಲರೂ ಮತ್ತಷ್ಟು ಶ್ರೀಮಂತಗೊಳಿಸಬೇಕು. ಶಾಸನಸಭೆಯು ಪ್ರಜಾಪ್ರಭುತ್ವದ ದೇಗುಲವಾಗಿದೆ. ಜನತೆ ನಿಮಗೆ ಮತ ಹಾಕಿರಲಿ, ಅಥವಾ ಇಲ್ಲದಿರಲಿ. ಆದರೆ, ನಿಮ್ಮ ಸಾರ್ವಜನಿಕ ಸೇವೆಯು ಎಲ್ಲಾ ನಾಗರಿಕರನ್ನು ಒಳಗೊಂಡಿರಬೇಕು. ಪ್ರತಿಯೊಬ್ಬರ ಹಿತಾಸಕ್ತಿಗಾಗಿ ಕಾರ್ಯ ನಿರ್ವಹಿಸುವುದು ನಿಮ್ಮ ಜವಾಬ್ದಾರಿಯಾಗಿರಲಿದೆ ಎಂದು ಹೇಳಿದರು. ಅಲ್ಲದೆ, 'ಉತ್ತರ ಪ್ರದೇಶ'ವು ಶೀಘ್ರವೇ 'ಉತ್ತಮ ಪ್ರದೇಶ'ವಾಗಲಿದೆ ಎಂದು ಆಶಿಸಿದರು.