ನವದೆಹಲಿ: ಪಕ್ಷದ ರಾಷ್ಟ್ರೀಯ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಅವರನ್ನು ಅಮಾನತು ಮಾಡುವ ನಿರ್ಧಾರದಿಂದ ದೆಹಲಿ ಬಿಜೆಪಿ ಘಟಕದಲ್ಲಿನ ಅನೇಕ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ.
ಇಬ್ಬರು ಪದಾಧಿಕಾರಿಗಳು ಪಕ್ಷಕ್ಕಾಗಿ ಶ್ರಮಿಸಿದ್ದು, ಮಿತಿ ದಾಟಿದ ಹಿನ್ನೆಲೆಯಲ್ಲಿ ಅವರನ್ನು ಶಿಕ್ಷೆಗೆ ಗುರಿಪಡಿಸಬಾರದಿತ್ತು ಎಂದು ದೆಹಲಿ ಬಿಜೆಪಿ ಘಟಕದಲ್ಲಿ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರೆ ಸ್ಥಾನದಿಂದ ನೂಪುರ್ ಶರ್ಮಾ ಹಾಗೂ ದೆಹಲಿ ಮಾಧ್ಯಮ ಘಟಕದ ಮುಖ್ಯಸ್ಥನ ಸ್ಥಾನದಿಂದ ನವೀನ್ ಜಿಂದಾಲ್ ಅವರನ್ನು ಭಾನುವಾರ ವಜಾಗೊಳಿಸಲಾಗಿತ್ತು.
ಬಿಜೆಪಿ ನೀತಿಗಳನ್ನು ಭಾವಾನಾತ್ಮಕವಾಗಿ ಅನುಸರಿಸಿಕೊಂಡು ಬಂದಿದ್ದು, ಹಲವು ಅದರ ಹಿಂದುತ್ವವನ್ನು ಒಪ್ಪಿಕೊಂಡಿದ್ದೇವೆ. ಈ ರೀತಿ ಪಕ್ಷದೊಳಗೆ ಸಮಸ್ಯೆಯಾದರೆ ಏನಾಗುತ್ತದೆ. ನಮ್ಮ ಪಾಲುದಾರರು ಯಾರು ಎಂದು ಪ್ರಶ್ನಿಸಿರುವ ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ, ಶರ್ಮಾ ಮತ್ತು ಜಿಂದಾಲ್ ವಿರುದ್ಧ ಪಕ್ಷದೊಳಗೆ ಯಾವುದೇ ರೀತಿಯ ಅಸಮಾಧಾನ ಇಲ್ಲ ಎಂದಿದ್ದಾರೆ.