ಸಮರಸ ಚಿತ್ರಸುದ್ದಿ: ಪೆರ್ಲ: ಮಣಿಯಂಪಾರೆ ಸಂತ ಲಾರೆನ್ಸರ ಇಗರ್ಜಿಯಲ್ಲಿ ವನಮಹೋತ್ಸವಾಚರಣೆ ಜರಗಿತು. ಐಸಿವೈಎಂ ಸಂಘಟನೆಯ ವತಿಯಿಂದ ಜರಗಿದ ವನ ಮಹೋತ್ಸ ವವನ್ನು ಧರ್ಮಗುರು ನೆಲ್ಸನ್ ಅಲ್ಮೇಡ ಉದ್ಘಾಟಿಸಿದರು. ಇಗರ್ಜಿಯ ಉಪಾಧ್ಯಕ್ಷ ಮೆಲ್ಟನ್, ವಿವಿಧ ಗುರಿಕ್ಕಾರರು ಹಾಗೂ ಚರ್ಚ್ ಸಂಬಂಧಿತ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.