ಕುಂಬಳೆ : ಬಿಜೆಪಿ ಕುಂಬಳೆ ಪಂಚಾಯತಿ ಸಮಿತಿ ಆಶ್ರಯದಲ್ಲಿ ಕುಂಬಳೆ ಪೇಟೆಯ ರಸ್ತೆ ಬದಿ ಮೀನು ಮಾರಾಟ ಮಾಡುವುದಕ್ಕೆ ಎದುರಾಗಿ ಕುಂಬಳೆ ಪಂಚಾಯತಿ ಕಚೇರಿಗೆ ಪ್ರತಿಭಟನ ಮರೆವಣಿಗೆ ಹಮ್ಮಿಕೊಳ್ಳಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಕುಂಬಳೆ ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ರೈ ವಹಿಸಿದ್ದರು. ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯ ಸ್ನೇಹಲತಾ ದಿವಾಕರ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಸದಸ್ಯರಾದ ಮುರಳೀಧರ ಯಾದವ್, ಮಾಜಿ ಜಿಲ್ಲಾಧ್ಯಕ್ಷ ರವೀಂದ್ರನ್ ಇವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕುಂಬಳೆ ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಮಯ್ಯ, ಕಾರ್ಯದರ್ಶಿ ಸುಧಾಕರ್ ಕಾಮತ್, ಮಂಡಲ ಉಪಾಧ್ಯಕ್ಷೆ ಪ್ರೇಮಲತಾ ಎಸ್, ಕುಂಬಳೆ ಪಂಚಾಯತಿ ಉತ್ತರ ವಲಯ ಅಧ್ಯಕ್ಷ ಪ್ರದೀಪ್ ಆರಿಕ್ಕಾಡಿ, ಬ್ಲಾಕ್ ಪಂಚಾಯತಿ ಸದಸ್ಯೆ ಪ್ರೇಮ ಶೆಟ್ಟಿ,ಪಂಚಾಯತಿ ಜನಪ್ರತಿನಿಧಿಗಳಾದ ಮೋಹನ್ ಬಂಬ್ರಾಣ, ಪ್ರೇಮಾವತಿ, ವಿದ್ಯಾ ಎನ್ ಪೈ, ಸುಲೋಚನಾ, ಶೋಭಾ, ಪುಷ್ಪಲತಾ ಕಾಜೂರ್, ವಿವೇಕಾನಂದ ಶೆಟ್ಟಿ, ಅಜಯ್ ನೈಕಾಪು, ಹಿರಿಯರಾದ ಗೋಪಾಲ್ ಪೂಜಾರಿ, ನೇತಾರರದ ಜಗದೀಶ್ ಪೇರಲಾ, ಸುಭ್ರಮಣ್ಯ ನಾಯಕ್, ಡಿ ಎನ್ ಶೆಟ್ಟಿ ಹಾಗೂ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು. ಕುಂಬಳೆ ಮಂಡಲ ಉಪಾಧ್ಯಕ್ಷ ರಮೇಶ್ ಭಟ್ ಸ್ವಾಗತಿಸಿ ಒಬಿಸಿ ಮೋರ್ಚಾ ಕುಂಬಳೆ ವಲಯ ಅಧ್ಯಕ್ಷ ಮಹೇಶ್ ಪುಣಿಯೂರ್ ವಂದಿಸಿದರು ಹಾಗೂ ಕುಂಬಳೆ ಪಂಚಾಯತಿ ಕಾರ್ಯದರ್ಶಿಗೆ ಕೊಡಲೇ ಇದರ ವಿರುದ್ಧ ಕ್ರಮಕೈಗೊಳ್ಳಬೇಕಾಗಿ ಮನವಿ ನೀಡಲಾಯಿತು.