ಕಾಸರಗೋಡು: ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಶ್ಯಾಮ ಪ್ರಸಾದ್ ಮುಖರ್ಜಿ ಸಂಸ್ಮರಣಾ ಸಮಾರಂಭ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಗುರುವಾರ ಜರುಗಿತು. ಬಿಜೆಪಿ ರಾಜ್ಯ ಸಮಿತಿ ಮಾಜಿ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಸಮರಂಭ ಉದ್ಘಾಟಿಸಿದರು.
ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎಂ. ಸಂಜೀವ ಶೆಟ್ಟಿ, ಪ್ರಮಿಳಾ ಸಿ. ನಾಯ್ಕ್, ಅಶೋಕನ್ ಕುಳನಡ, ಎ.ವೇಲಾಯುಧನ್, ಎಂ. ವೇಲಾಯುಧನ್, ಕೆ. ಸವಿತಾ ಟೀಚರ್, ಮಧು, ಮನುಲಾಲ್ ಮೇಲತ್, ಪುಷ್ಪಾಗೋಪಾಲನ್, ಎಂ. ಅಶ್ವಿನಿ, ಪ್ರಮಿಳಾ ಮಜಲ್ ಉಪಸ್ಥಿತರಿದ್ದರು.