ಬದಿಯಡ್ಕ: ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ಬಡವು ಯೋಜನೆಯ 36, 37 ಸೇವಾ ಕಾರ್ಯವು ಜರುಗಿತು. 36ನೇ ಮತ್ತು 37ನೇ ಸೇವೆಯನ್ನು ಕಾಸರಗೋಡು ಜಿಲ್ಲೆಯ ಬೇಳ ಗ್ರಾಮದ ಮಾನ್ಯ ಸಮೀಪದ ಪುದುಕೋಳಿ ನಿವಾಸಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ವಸಂತ ಮತ್ತು ಕುಟುಂಬಕ್ಕೆ ಹಾಗೂ 37ನೇ ಸೇವೆಯನ್ನು ಪುದುಕೋಳಿ ನಿವಾಸಿ ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವ ಸತ್ಯನಾರಾಯಣ ಮತ್ತು ಕುಟುಂಬಕ್ಕೆ ದೈನಂದಿನ ದಿನಸಿ ಸಾಮಗ್ರಿಗಳನ್ನು ಹಸ್ತಾಂತರಿಸುವ ಮೂಲಕ ಜರುಗಿತು.
ಈ ಸಂದಭರ್Àದಲ್ಲಿ ಬದಿಯಡ್ಕ ಪಂಚಾಯಿತಿ ಸದಸ್ಯರಾದ ಶಂಕರ ಡಿ, ಸದಸ್ಯೆ ಸ್ವಪ್ನ, ಬಿಜೆಪಿ ಬದಿಯಡ್ಕ ಪಂಚಾಯಿತಿ ಪಶ್ಚಿಮ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಮಧುಚಂದ್ರ ಮಾನ್ಯ, ಶಿವಾಜಿ ಫ್ರೆಂಡ್ಸ್ ಕ್ಲಬ್ ನೀರ್ಚಾಲು ಇದರ ಅಧ್ಯಕ್ಷ ಜಯಪ್ರಸಾದ್, ಸ್ಥಳೀಯರಾದ ತಿರುಮಲೇಶ್ವರ ಪುದುಕೋಳಿ, ಶಶಿಕಲಾ ಪುದುಕೋಳಿ, ರಕ್ಷಿತ್, ಲಕ್ಷ್ಮೀಶ ಮಾನ್ಯ, ಸಂಸ್ಥೆಯ ಹಿರಿಯ ಸಲಹೆಗಾರ ರಾಧಾಕೃಷ್ಣ ಮಾನ್ಯ, ಸಂಸ್ಥಾಪಕರು ರಾಜ್ಯ ಸಮಿತಿ ಸಲಹೆಗಾರ ಬಾಲಚಂದ್ರ ಶೆಟ್ಟಿ ಸೋಮೇಶ್ವರ, ಸಂಸ್ಥಾಪಕರು, ರಾಜ್ಯಾಧ್ಯಕ್ಷ ಮನೋಜ್ ಕುಲಾಲ್ ಕೊಡಕ್ಕಲ್, ಸಂಸ್ಥಾಪಕ, ರಾಜ್ಯ ಪ್ರಧಾನ ಕಾರ್ಯದರ್ಶಿ ವಂಶಿ ಪಂಡಿತ್ ಕಣ್ಣೂರು, ಸಂಸ್ಥಾಪಕ ರಾಜ್ಯ ಉಪಾಧ್ಯಕ್ಷ ಪುಷ್ಪರಾಜ್ ರಾವ್, ಸಂಸ್ಥಾಪಕ, ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರೇಶ್ ಮಾನ್ಯ, ಸಂಸ್ಥಾಪಕರು ರಾಜ್ಯ ಕೋಶಾಧಿಕಾರಿ ಸಚಿನ್ ಜಿ ಮಣೇಲ್ ಬೈಲ್, ಸಂಸ್ಥಾಪಕ ರಾಜ್ಯ ಸಮಿತಿ ಸಂಘಟನಾ ಕಾರ್ಯದರ್ಶಿ ವಿಕೇಶ್ ಕುಲಾಲ್, ಸಂಸ್ಥೆಯ ಕಲಾ ಚಾವಡಿ ಘಟಕದ ಸಲಹೆಗಾರ ಕೇಶವ್ ದಾಸ್ ಆಚಾರ್ಯ, ಪ್ರಚಾರ ಸಮಿತಿ ಅಧ್ಯಕ್ಷೆ ಲತಾ ಜಗದೀಶ್, ಸಂಸ್ಥೆಯ ಸದಸ್ಯೆ ಹರಿಣಿ ಕೆಂಜಾರು, ಸದಸ್ಯರಾದ ದೀಪಕ್ ರಾಜ್ ಉಪ್ಪಳ, ಶ್ರೀಕುಮಾರ್, ರಮೇಶ್ ಕುಲಾಲ್ ನಾರಾಯಣಮಂಗಲ, ಆದರ್ಶ್ ಬೋಳಂತೂರು ಮುಂತಾದವರು ಉಪಸ್ಥಿತರಿದ್ದರು.