ಕಾಸರಗೋಡು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಮಹಿಳಾ ರಕ್ಷಣಾ ಕಚೇರಿಯ ನೇತೃತ್ವದಲ್ಲಿ ವಿಶೇಷ ಮಾನಸಿಕ ಆರೋಗ್ಯ ಸೇವೆಗಳ ಯೋಜನೆಯನ್ನು ಪ್ರಾರಂಭಿಸಲಾಗಿದೆ. ವಿದ್ಯಾನಗರ ಕಲೆಕ್ಟರೇಟ್ ನಲ್ಲಿ ಮಹಿಳಾ ರಕ್ಷಣಾಧಿಕಾರಿಗಳ ಕಚೇರಿಯನ್ನು ಎಡಿಎಂ ಎ.ಕೆ.ರಾಮೇಂದ್ರನ್ ಉದ್ಘಾಟಿಸಿದರು.
ಕೌಟುಂಬಿಕ ಹಿಂಸಾಚಾರಕ್ಕೆ ದಂಪತಿಗಳ ವರ್ತನೆಯ ಸಮಸ್ಯೆ ಹಾಗೂ ಮಾನಸಿಕ ಸಮಸ್ಯೆಗಳೇ ಪ್ರಮುಖ ಕಾರಣವಾಗಿದ್ದು, ಸಕಾಲದಲ್ಲಿ ಚಿಕಿತ್ಸೆ ಪಡೆಯುವುದು ಮುಖ್ಯ ಎಂದರು. ಮಕ್ಕಳ ರಕ್ಷಣಾಧಿಕಾರಿ ಸಿ.ಎ.ಬಿಂದು ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜನರಲ್ ಅಧೀಕ್ಷಕ ಡಾ.ಕೆ.ರಾಜಾರಾಂ ಮುಖ್ಯ ಅತಿಥಿಯಾಗಿದ್ದರು. ಮಹಿಳಾ ರಕ್ಷಣಾಧಿಕಾರಿ ಎಂ.ವಿ.ಸುನಿತಾ ಸ್ವಾಗತಿಸಿ, ಸಿನಿ ಸೆಬಾಸ್ಟಿಯನ್ ವಂದಿಸಿದರು. ಮನೋವೈದ್ಯರ ಉಚಿತ ಸೇವೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮುಖ್ಯ ಸಮನ್ವಯ ಮೇಲ್ವಿಚಾರಣಾ ಸಮಿತಿಯೊಂದಿಗೆ ಸಮಾಲೋಚಿಸಿ ಏರ್ಪಡಿಸಲಾಗಿದೆ. ಸೇವೆಯ ಅಗತ್ಯವಿರುವವರು ಪ್ರತಿ ತಿಂಗಳ ಎರಡನೇ ಶುಕ್ರವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2ರ ವರೆಗೆ ಲಭ್ಯವಿದೆ. 04994 256 266, 9446270127 ಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬೇಕು.