ನವದೆಹಲಿ:ವಿಶ್ವ ಸೈಕಲ್ ದಿನದ ಪ್ರಯುಕ್ತ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಸೈಕಲ್ ತುಳಿಯುತ್ತಿರುವ ಫೋಟೊವನ್ನು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಗಾಂಧಿ ಅವರದ್ದು ಪರಿಸರ ಸ್ನೇಹಿ ಜೀವನಶೈಲಿ ಎಂದು ಬಣ್ಣಿಸಿದ್ದಾರೆ.
ನವದೆಹಲಿ:ವಿಶ್ವ ಸೈಕಲ್ ದಿನದ ಪ್ರಯುಕ್ತ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಸೈಕಲ್ ತುಳಿಯುತ್ತಿರುವ ಫೋಟೊವನ್ನು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಗಾಂಧಿ ಅವರದ್ದು ಪರಿಸರ ಸ್ನೇಹಿ ಜೀವನಶೈಲಿ ಎಂದು ಬಣ್ಣಿಸಿದ್ದಾರೆ.
'ಇಂದು ವಿಶ್ವ ಸೈಕಲ್ ದಿನ. ಸುಸ್ಥಿರ ಮತ್ತು ಅತ್ಯುತ್ತಮ ಆರೋಗ್ಯಕರ ಜೀವನಶೈಲಿ ರೂಪಿಸಿಕೊಳ್ಳಲು ಮಹಾತ್ಮ ಗಾಂಧಿ ಅವರಿಗಿಂತ ಉತ್ತಮ ಸ್ಫೂರ್ತಿ ಬೇರೋಬ್ಬರಿಲ್ಲ' ಎಂದು ಮೋದಿ ಹೇಳಿದ್ದಾರೆ.
ಸಂಚಾರದ ಜೊತೆಗೆ ದೈಹಿಕ ಆರೋಗ್ಯ, ಫಿಟ್ನೆಸ್ ನೀಡುವ ಸೈಕಲ್ ಅನ್ನು ಹೆಚ್ಚು ಬಳಸುವಂತೆ ಉತ್ತೇಜಿಸಲು ಪ್ರತಿವರ್ಷ ಜೂನ್ 3ರಂದು ವಿಶ್ವ ಸೈಕಲ್ ದಿನ ಎಂದು ಆಚರಿಸಲಾಗುತ್ತದೆ.