ಕಾಸರಗೋಡು: ಶವರ್ಮ ಸೇವಿಸಿ ಸಾವನ್ನಪ್ಪಿದ ಪ್ಲಸ್ ಒನ್ ವಿದ್ಯಾರ್ಥಿ ಇ.ವಿ ದೇವನಂದ ಅವರ ಮನೆಗೆ ಕೇರಳ ವಿಧಾನಸಭಾ ಅನಧಿಕೃತ ವಿಧೇಯಕಗಳು ಮತ್ತು ನಿರ್ಣಯಗಳ ಸಮಿತಿ ಭೇಟಿ ನೀಡಿತು.ದೇವನಂದ ಅವರ ತಾಯಿ ಪ್ರಸನ್ನ ಅವರು ತಮ್ಮ ಸಹೋದರಿ ಸೌದಾಮಿನಿಯೊಂದಿಗೆ ನೆಲೆಸಿರುವ ಚೆರುವತ್ತೂರು ಮಟ್ಟಾಲದ ಮನೆಗೆ ಸಮಿತಿ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿತು.
ಕರಿವೆಳ್ಳೂರ್ ಎ.ವಿ ಸ್ಮಾರಕ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಒನ್ ವಿದ್ಯಾರ್ಥಿನಿ, ಕರಿವೆಳ್ಳೂರು ಪೆರಾಲಂನ ದಿವಂಗತ ಚಂದ್ರೋತ್ ನಾರಾಯಣನ್ ಮತ್ತು ಇ.ವಿ.ಪ್ರಸನ್ನ ದಂಪತಿಯ ಏಕ ಪುತ್ರಿ ದೇವನಂದ ಮೇ 1ರಂದು ವಿಷಾಹಾರ ಸೇವನೆಯಿಂದ ಮೃತಪಟ್ಟಿದ್ದರು. ಶಾಸಕ ರಾಜಗೋಪಾಲನ್, ಚೆರುವತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ವಿ.ಪ್ರಮೀಳಾ, ಉಪಾಧ್ಯಕ್ಷ ಪಿ.ವಿ.ರಾಘವನ್, ಕಾರ್ಯದರ್ಶಿ ಎ.ಕೆ.ಮನೋಜ್, ಸ್ಥಾಯಿ ಸಮಿತಿ ಅಧ್ಯಕ್ಷೆ ಪಿ.ಪದ್ಮಿನಿ, ಕೆ.ರಮಣಿ, ಸಿ.ವಿ.ಗಿರೀಶ್ ಉಪಸ್ಥಿತರಿದ್ದರು.