ಮುಂಬೈ: ರಾಷ್ಟ್ರಪತಿ ಎಂದರೆ ಹೇಗಿರಬೇಕು ಎಂಬ ವಿಚಾರವಾಗಿ ಶಿವಸೇನಾ ತನ್ನ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ಬರೆದುಕೊಂಡಿದ್ದು, ದೇಶದಲ್ಲಿ ಮತೀಯ ಒಡಕುಗಳು ಹೆಚ್ಚಾದಾಗ ರಾಷ್ಟ್ರಪತಿ ಸುಮ್ಮನೆ ಕೂರುತ್ತಾರೆಯೇ? ಎಂದು ಪ್ರಶ್ನಿಸಿದೆ.
ಮುಂಬೈ: ರಾಷ್ಟ್ರಪತಿ ಎಂದರೆ ಹೇಗಿರಬೇಕು ಎಂಬ ವಿಚಾರವಾಗಿ ಶಿವಸೇನಾ ತನ್ನ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ಬರೆದುಕೊಂಡಿದ್ದು, ದೇಶದಲ್ಲಿ ಮತೀಯ ಒಡಕುಗಳು ಹೆಚ್ಚಾದಾಗ ರಾಷ್ಟ್ರಪತಿ ಸುಮ್ಮನೆ ಕೂರುತ್ತಾರೆಯೇ? ಎಂದು ಪ್ರಶ್ನಿಸಿದೆ.
ರಾಷ್ಟ್ರಪತಿ ರಬ್ಬರ್ ಸ್ಟ್ಯಾಂಪ್ ಆಗಬಾರದು. ರಾಷ್ಟ್ರದ ಸಂವಿಧಾನ ಮತ್ತು ನ್ಯಾಯಾಂಗದ ಪಾಲಕನಾಗಿರಬೇಕು. ರಾಷ್ಟ್ರಪತಿ ಅಧಿಕಾರದ ಮುಂದೆ ಸಂಸತ್ತು, ಮಾಧ್ಯಮ, ನ್ಯಾಯಾಂಗ ಮತ್ತು ಸರ್ಕಾರಗಳೆಲ್ಲವೂ ಮಂಡಿಯೂರಬೇಕು. ರಾಷ್ಟ್ರದಲ್ಲಿ ಮತೀಯ ಒಡಕುಗಳು ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ರಾಷ್ಟ್ರಪತಿಯಾದವರು ಸುಮ್ಮನೆ ಕೂರುತ್ತಾರೆಯೇ? ಎಂದು ಶಿವಸೇನಾ ಹಾಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಹೆಸರನ್ನು ಉಲ್ಲೇಖಿಸದೆ ವಾಗ್ದಾಳಿ ನಡೆಸಿದೆ.
ರಾಷ್ಟ್ರಪತಿ ದೇಶದ ಮೂರು ಶಸಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್. ನ್ಯಾಯಾಂಗದ ಮುಖ್ಯಸ್ಥರು. ರಾಷ್ಟ್ರಪತಿ ಕುರ್ಚಿಯಲ್ಲಿ ಕುಳಿತವರು ರಾಷ್ಟ್ರಕ್ಕೆ ದಿಕ್ಸೂಚಿಯನ್ನು ತೋರಿಸುವವರು. ಆದರೆ ಇವರಿಗೆ ಕಳೆದ ಕೆಲವು ವರ್ಷಗಳಿಂದ ತನ್ನಿಚ್ಛೆಯಂತೆ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಶಿವಸೇನಾ ಹೇಳಿದೆ.