ಪಟ್ನಾ: ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಹಾರಿಯೊಬ್ಬರು ಸ್ಪರ್ಧಿಸಬೇಕೆಂಬ ನಂಬಿಕೆಯಿಂದ ಲಾಲು ಪ್ರಸಾದ್ ಯಾದವ್ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಆದರೆ, ಇವರು ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಅಲ್ಲ.
ಪಟ್ನಾ: ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಹಾರಿಯೊಬ್ಬರು ಸ್ಪರ್ಧಿಸಬೇಕೆಂಬ ನಂಬಿಕೆಯಿಂದ ಲಾಲು ಪ್ರಸಾದ್ ಯಾದವ್ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಆದರೆ, ಇವರು ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಅಲ್ಲ.
ಸರನ್ ಜಿಲ್ಲೆ ನಿವಾಸಿಯಾದ 42 ವರ್ಷದ ಯಾದವ್ ಅವರು ಈಗಾಗಲೇ ದೆಹಲಿಗೆ ವಿಮಾನ ಟಿಕೆಟ್ ಕಾಯ್ದಿರಿಸಿದ್ದು, ಜೂನ್ 15 ರಂದು ನಾಮಪತ್ರ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ.
ಬಿಹಾರ ರಾಜ್ಯಪಾಲರಾಗಿದ್ದ ರಾಮನಾಥ ಕೋವಿಂದ್ ಮತ್ತು ಲೋಕಸಭಾ ಮಾಜಿ ಸ್ಪೀಕರ್ ಮೀರಾ ಕುಮಾರ ನಡುವೆ ಸ್ಪರ್ಧೆ ಇದ್ದಾಗ 2017ರಲ್ಲೂ ಇವರು ಸ್ಪರ್ಧಿಸಿದ್ದರು.
'ಕಳೆದ ಬಾರಿ ಸಾಕಷ್ಟು ಸಂಖ್ಯೆಯಲ್ಲಿ ಸೂಚಕರಿಲ್ಲದ ಕಾರಣ ನಾಮಪತ್ರ ತಿರಸ್ಕರಿಸಲಾಯಿತು. ಈ ಬಾರಿ ಉತ್ತಮ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೀವನೋಪಾಯಕ್ಕೆ ಕೃಷಿ ಮಾಡುತ್ತೇನೆ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ' ಎಂದು ಯಾದವ್ ಹೇಳಿದರು.