ಸಮರಸ ಚಿತ್ರಸುದ್ದಿ: ಮಂಜೇಶ್ವರ: ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಪ್ರೋತ್ಸಾಹಿಸಲು ಮತ್ತು ಓದಲು ಬರೆಯಲು ಸಮರ್ಥರನ್ನಾಗಿಸಲು ಆಯೋಜಿಸುವ ಅಕಾಡೆಮಿಕ್ ಮಾಸ್ಟರ್ ಪ್ಲಾನ್‍ನ್ನು ಮುಳಿಂಜ ಶಾಲೆಯಲ್ಲಿ ಸಂಪನ್ಮೂಲ ವ್ಯಕ್ತಿ, ಕಡಂಬಾರು ಶಾಲಾ ಶಿಕ್ಷಕ, ಮುಳಿಂಜ ಶಾಲೆಯ ಎಸ್.ಎಂ.ಸಿ ಸದಸ್ಯ ಇಸ್ಮಾಯಿಲ್ ಮಾಸ್ತರ್ ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಇದರ ಕಾರ್ಯ ವೈಖರಿಯ ಬಗ್ಗೆ ತಿಳಿಸಿದರು. ಹಿರಿಯ ಶಿಕ್ಷಕಿ ಪುಷ್ಪಲತ ಸೋಂಕಾಲು ಸ್ವಾಗತಿಸಿ ಶಿಕ್ಷಕ ಸುಹೇಶ್ ವಂದಿಸಿದರು.