ಕಾಸರಗೋಡು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಣ್ಯ-ವನ್ಯಜೀವಿ, ಸಾಮಾಜಿಕ ಅರಣ್ಯ, ಸ್ಥಳೀಯಾಡಳಿತ ಸಂಸ್ಥೆ ಹಾಗೂ ಉದ್ಯೋಗ ಖಾತ್ರಿ ಯೋಜನೆ ಸಹಕಾರದೊಂದಿಗೆ ಸಸಿ ನೆಡುವ ಯೋಜನೆಗೆ ಶಾಸಕ ಇ ಚಂದ್ರಶೇಖರನ್ ಚಾಲನೆ ನೀಡಿದರು. ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಮರವಾಗಬಲ್ಲ ಹಾಗೂ ಹಣ್ಣುಗಳನ್ನು ಒಳಗೊಂಡ ಸಸಿಗಳನ್ನು ನೆಡುವ ಮೂಲಕ ಜನರು ಹಾಗೂ ಪ್ರಾಣಿಪಕ್ಷಿಗಳಿಗೆ ಸಹಕಾರಿಯಾಗುವಂತಾಗಬೇಕು ಎಂದು ತಿಳಿಸಿದರು. ರಾವಣೀಶ್ವರಂ ಸರ್ಕಾರಿಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಅಜಾನೂರು ಗ್ರಾಮಪಂಚಾಯಿತಿ ಅಧ್ಯಕ್ಷೆ ಟಿ.ಶೋಭಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಿಭಾಗೀಯ ಅರಣ್ಯಾಧಿಕಾರಿ ಪಿ.ಬಿ.ಬಿಜು ಪ್ರಾಸ್ತಾವಿಕ ಭಾಷಣ ಮಾಡಿದರು.
ಕಾಂಞಂಗಾಡ್ ಬ್ಲಾಕ್ ಪಂಚಾಯತ್ ಸದಸ್ಯೆ ಎಂ.ಜಿ ಪುಷ್ಪ, ಅಜಾನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ, ಅಧ್ಯಕ್ಷ ಕೆ ಸಬೀಶ್ ವಾರ್ಡ್ ಸದಸ್ಯ ಪಿ ಮಿನಿ,ಎಲ್‍ಸಿಜಿಡಿ ಜೋಯಿಂಟ್ ನಿರ್ದೇಶಕ ಎನ್ ಜಯ್ಸನ್ ಮ್ಯಾಥ್ಯೂ, ಎಂಎನ್‍ಆರ್‍ಇಜಿಎಸ್ ಜಾಯಿಂಟ್ ಪೆÇ್ರೀಗ್ರಾಂ ಕಾರ್ಡಿನೇಟರ್ ಪ್ರದೀಪ್ ಕುಮಾರ್, ರಾವಣೇಶ್ವರಂ ಗವ: ಹಯರ್ ಸೆಕೆಂಡರಿ ಸ್ಕೂಲ್ ಪ್ರಿನ್ಸಿಪಾಲ್ ವಿ ವಿ ಭಾರ್ಗವನ್, ಪಿ.ಟಿ.ಎ ಅಧ್ಯಕ್ಷ ಕೆ. ಶಮುಂತಾದವರು ಉಪಸ್ಥೀತರಿದ್ದರು. ರೆಯಿಂಚ್ ಫಾರೆಸ್ಟ್ ಆಫೀಸರ್ ಕೆ.ವಿ ಅರುಣೇಶ್ ಸ್ವಾಗತಿಸಿದರು. ರಾವಣೇಶ್ವರಂ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ಮುಖ್ಯ ಶಿಕ್ಷಕಿ ಪಿ ಪಿ ರತ್ನಾಕರನ್ ವಂದಿಸಿದರು.