ಸಮರಸ ಚಿತ್ರಸುದ್ದಿ: ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನ ಜರಗಿತು. ಬಿ.ಆರ್.ಸಿಯ ಬಿ.ಪಿ.ಸಿ ವಿಜಯಕುಮಾರ ಪಾವಳ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಯೋಗ ದಿನದ ಔಚಿತ್ಯವನ್ನು ತಿಳಿಸಿದರು. ಅಧ್ಯಾಪಕ ಫಿರೋಜ್ ಮಕ್ಕಳಿಗೆ ಸರಳ ವ್ಯಾಯಾಮವನ್ನು ಹೇಳಿಕೊಟ್ಟರು. ಹಿರಿಯ ಶಿಕ್ಷಕಿ ಪುಷ್ಪಲತ ಸೋಂಕಾಲು ವಂದಿಸಿದರು.