ಪೆರ್ಲ: ಸಾಹಿತ್ತಿಕ ಚಟುವಟಿಕೆಗಳ ಮೂಲಕ ಸುದೃಢ ಸಮಾಜವೊಂದನ್ನು ನಿರ್ಮಿಸಲು ಸಾಧ್ಯವಿದೆ. ಅನುಭವ, ಅರಿವಿನ ಮೂಲಕ ಅಕ್ಷರಗಳು ಪೋಣಿಸಲ್ಪಟ್ಟಾಗ ಉತ್ತಮ ಕಾವ್ಯ ರೂಪುಗೊಳ್ಳುತ್ತದೆ. ಕವಿಯ ಭಾವನೆಗಳು ವೈಯುಕ್ತಿಕವಾದರೂ, ಸಾರ್ವಕಾಲಿಕ ಸತ್ಯಗಳು ಅದರಲ್ಲಿ ಜೀವಂತವಾಗಿರುತ್ತದೆ ಎಂದು ನಿವೃತ್ತ ಶಿಕ್ಷಕ, ಸಾಹಿತಿ ವಿಜಯ ಕಾನ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವದ ಸವಿನೆನಪಿಗಾಗಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಆಶ್ರಯದಲ್ಲಿ ಕಾಸರಗೋಡಿನ ಶ್ರೀರಾಮನಾಥ ಸಾಂಸ್ಕøತಿಕ ಭವನ ಸಮಿತಿ ವತಿಯಿಂದ ಪೆರ್ಲ ಸಮೀಪದ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತಿ)ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಗಡಿನಾಡ ಸಾಂಸ್ಕøತಿಕ ಉತ್ಸವದಲ್ಲಿ ನಡೆದ ಕವಿ ಸಮ್ಮಿಲನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಡಿ ಪ್ರದೇಶಾಭಿವೃದ್ದಿ ಮೂಲಕ ಕಾಸರಗೋಡಲ್ಲಿ ಆಯೋಜನೆಗೊಂಡ ಗಡಿನಾಡು ಸಾಂಸ್ಕøತಿಕ ಉತ್ಸವ ಕ್ಷೀಣಿಸುತ್ತಿರುವ ಭಾಷಾಭಿಮಾನದಿಂದ ಮತ್ತೆ ಎಚ್ಚರಗೊಳ್ಳಲು ಗಡಿ ಉತ್ಸವಗಳು ಶಕ್ತಿ ನೀಡುತ್ತದೆ. ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಭಾಷಾ ಚಳವಳಿಗೆ ಅವರನ್ನು ತೊಡಗಿಸಿಕೊಳ್ಳುವಲ್ಲಿ ಇನ್ನಷ್ಟು ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂವರು ತಿಳಿಸಿದರು.
ಈ ಸಂದರ್ಭ ನಡೆದ ಕವಿಗೋಷ್ಠಿಯಲ್ಲಿ ಹರೀಶ್ ಪೆರ್ಲ, ಡಾ.ಎಸ್.ಎನ್.ಭಟ್ ಪೆರ್ಲ, ಸುಭಾಶ್ ಪೆರ್ಲ, ನಿರ್ಮಲ ಶೇಷಪ್ಪ ಖಂಡಿಗೆ, ವನಜಾಕ್ಷಿ ಚೆಂಬ್ರಕಾನ, ಶ್ರೀನಿವಾಸ ಪೆರಿಕ್ಕಾನ, ಆನಂದ ರೈ ಅಡ್ಕಸ್ಥಳ, ಪ್ರಿಯಾ ಸಾಯ, ಅನನ್ಯ ಸ್ವರ್ಗ, ಸುಂದರ ಬಾರಡ್ಕ, ಮಂಜುಶ್ರೀ ನಲ್ಕ, ರಿತೇಶ್ ಕಿರಣ್ ಕಾಟುಕುಕ್ಕೆ, ಶಂಕರ ಎಂ.ಎಸ್, ಸುಜಯಾ ಸ್ವರ್ಗ, ಬಾಲಕೃಷ್ಣ ನಾಯ್ಕ ಏಳ್ಕಾನ, ಶರ್ಮಿಳಾ ಬಜಕ್ಕೂಡ್ಲು, ಸೌಪರ್ಣಿಕಾ ಕಾಟುಕುಕ್ಕೆ, ಪೃಥ್ವಿರಾಜ್ ಕಾಟುಕುಕ್ಕೆ, ನವನೀತ ಸೂರ್ಡೇಲು, ಸ್ಕಂದ ಕಾಟುಕುಕ್ಕೆ, ಬಾಲಕೃಷ್ಣ ಬೇರಿಕೆ ಕವನಗಳನ್ನು ವಾಚಿಸಿದರು. ರಿತೇಶ್ ಕಿರಣ್ ಕಾಟುಕುಕ್ಕೆ ಸ್ವಾಗತಿಸಿ, ಸುಭಾಶ್ ಪೆರ್ಲ ವಂದಿಸಿದರು. ಆನಂದ ರೈ ಅಡ್ಕಸ್ಥಳ ನಿರೂಪಿಸಿದರು. ಗುರುಪ್ರಸಾದ್ ಕೋಟೆಕಣಿ ಹಾಗೂ ಶಿವರಾಮ ಕಾಸರಗೋಡು ನೇತೃತ್ವ ವಹಿಸಿದ್ದರು.