ತಿರುವನಂತಪುರ; ಮೊಬೈಲ್ ಚಟಕ್ಕೆ ಬಿದ್ದಿದ್ದ ಪ್ಲಸ್ ಒನ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಕಲ್ಲಂಬಲದಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆ ಮುನ್ನ ಬಾಲಕಿ ಬರೆದ ಪತ್ರ ಪೋಲೀಸರಿಗೆ ಲಭ್ಯವಾಗಿದ್ದು, ಪತ್ರದ ಪ್ರಕಾರ, ಅತಿಯಾದ ಮೊಬೈಲ್ ಫೋನ್ ಬಳಕೆ ಹುಡುಗಿಯ ಆತ್ಮಹತ್ಯೆಗೆ ಕಾರಣವಾಯಿತು.
ತನಗೆ ಮೊಬೈಲ್ ಚಟ ಅತಿಯಾಗಿದ್ದು, ಆಪ್ತ ಸ್ನೇಹಿತರಿಲ್ಲ ಎಂದು ಬಾಲಕಿ ಆತ್ಮಹತ್ಯೆ ಪತ್ರದಲ್ಲಿ ಹೇಳಿದ್ದಾಳೆ. ತಾನು ಫೋನ್ ಮತ್ತು ಸಾಮಾಜಿಕ ಜಾಲತಾಣಗಳಿಗೆ ಅಡಿಕ್ಟ್ ಆಗಿದ್ದೇನೆ ಎಂದು ಬಾಲಕಿ ಹೇಳಿದ್ದಾಳೆ.
ತನ್ನ ಎಳೆಯ ತಂಗಿಗೆ ಮೊಬೈಲ್ ಕೊಟ್ಟು ಕಲಿಸಬೇಡಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮೊಬೈಲ್ ಚಟಕ್ಕೆ ಬಿದ್ದಿರುವ ಬಾಲಕಿ ಖಿನ್ನತೆಯಿಂದ ಬಳಲುತ್ತಿದ್ದು, ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. . ವಿವರವಾದ ತನಿಖೆಗಾಗಿ ಬಾಲಕಿಯ ಮೊಬೈಲ್ ಅನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇದನ್ನು ವಿಶಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುವುದು. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.