ನವದೆಹಲಿ: ಏಪ್ರಿಲ್ ನಲ್ಲಿ ಏರುಗತಿಯಲ್ಲಿದ್ದ ನಿರುದ್ಯೋಗ ಸಮಸ್ಯೆ ಮೇ ತಿಂಗಳಲ್ಲಿ ತಹಬದಿಗೆ ಬಂದಿದ್ದು, ಶೇ.7.83 ರಿಂದ ಶೇ.7.12 ಕ್ಕೆ ಅಲ್ಪ ಪ್ರಮಾಣದ ಕುಸಿತ ಕಂಡಿದೆ.
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ)ಯ ಪ್ರಕಾರ, ನಗರಗಳಲ್ಲಿ ನಿರುದ್ಯೋಗ ಪ್ರಮಾಣ ಶೇ.10.95 ರಿಂದ ಶೇ.8.21 ರಷ್ಟಕ್ಕೆ ಕುಸಿತ ಕಂಡಿದೆ. ಗ್ರಾಮೀಣ ಭಾಗದಲ್ಲಿ ಇದು ಶೇ.7.7 ರಿಂದ ಶೇ.6.62 ರಷ್ಟಿದೆ. ಛತ್ತೀಸ್ ಗಢದಲ್ಲಿ ಅತ್ಯಂತ ಕಡಿಮೆ ನಿರುದ್ಯೋಗ ಅಂದರೆ ಶೇ.0.7 ರಷ್ಟಿದ್ದರೆ ಹರ್ಯಾಣ ಗರಿಷ್ಠ ಅಂದರೆ ಶೇ.24.6 ರಷ್ಟು ನಿರುದ್ಯೋಗ ಹೊಂದಿದೆ.
ದೇಶಾದ್ಯಂತ ಆರ್ಥಿಕ ಚಟುವಟಿಕೆಗಳು ಪುಟಿದೆದ್ದಿರುವುದರಿಂದ ಮೇ ತಿಂಗಳಲ್ಲಿ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ ಎಂದು ಟೀಮ್ ಲೀಸ್ ಸೇವೆಗಳ ಉಪಾಧ್ಯಕ್ಷ, ಉದ್ಯಮ ವಿಭಾಗದ ಮುಖ್ಯಸ್ಥ ಅಜಯ್ ಥಾಮಸ್ ಹೇಳಿದ್ದಾರೆ.