ಕಾಸರಗೋಡು: ಬೇಕಲದ ಅರವತ್ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಜರಗುತ್ತಿರುವ ಪುನಃ ಪ್ರತಿಷ್ಠಾಬ್ರಹ್ಮಕಲಶೋತ್ಸವಕ್ಕೆ ಶೇಷವನ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಿಂದ ಪಾತ್ರೆ ಸಾಮಗ್ರಿ, ಅಕ್ಕಿ, ತೆಂಗಿನಕಾಯಿ, ತರಕಾರಿ ಸೇರಿದಂತೆ ವಿವಿಧ ಸಾಮಗ್ರಿ ಸಮರ್ಪಿಸಲಾಯಿತು.
ಅರವತ್ ಶ್ರೀ ಸುಬ್ರಹ್ಮಣ್ಯ ಸ್ವಾಮಿಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀಕೆ.ಯು ಪದ್ಮನಾಭ ತಂತ್ರಿಗಳು ಹಾಗು ಸಮಿತಿ ಪದಾಧಿಕಾರಿಗಳು ಹೊರೆಕಾಣಿಕೆಯನ್ನು ಸ್ವೀಕರಿಸಿದರು. ಶೇಷವನ ಕ್ಷೇತ್ರದ ರಕ್ಷಾಧಿಕಾರಿ ಶ್ರೀಕೃಷ್ಣ ಉಪಾಧ್ಯಾಯ, ಬ್ರಹ್ಮವಾಹಕರಾದ ಮುಟ್ಟತ್ತೋಡಿ ಕೃಷ್ಣಪ್ರಸಾದ್ ಅಡಿಗ, ಸಹಾಯಕ ಅರ್ಚಕ ಗೋಪಾಲಕೃಷ್ಣ ಕಾರಂತ ಮತ್ತುಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್‍ನ ಅನುವಂಶಿಕ ಮೊಕ್ತೇಸರ ಸದಾಶಿವ, ಆಡಳಿತ ಮೊಕ್ತೇಸರ ಕಿರಣ್ ಪ್ರಸಾದ್ ಕೂಡ್ಲು, ಕಾರ್ಯದರ್ಶಿ ವಸಂತ, ಕೋಶಾಧಿಕಾರಿ ಸುರೇಶ್ ನಾಯ್ಕ್, ಸದಸ್ಯ ಶರತ್ ನಾಯ್ಕ್, ಯುವಕ ಸಂಘದ ಅಧ್ಯಕ್ಷ ರಮೇಶ್ ಕಾಸಿನಡಿ, ಮಹಿಳಾ ಸಂಘದ ರಕ್ಷಾಧಿಕಾರಿ ಆಶಾ ಉಪಾಧ್ಯಾಯ,ಗೌರವ ಆಧ್ಯಕ್ಷೆ ಯಶೋಧ, ಅಧ್ಯಕ್ಷೆ ರತ್ನಾಪಾಯಿಚ್ಚಾಲ್, ಕಾರ್ಯದರ್ಶಿ ಲಾವಣ್ಯ, ಕೋಶಾಧಿಕಾರಿ ಕವಿತ, ಸ್ಕಂದ ಗೋಶಾಲೆಯ ಸಂಚಾಲಕ ಮುರಳೀಧರ ಶೆಟ್ಟಿ ಹಾಗೂ ಸದಸ್ಯರು ಸಹಕರಿಸಿದರು.