ಮಂಜೇಶ್ವರ: ಪಶು ಸಂಗೋಪನಾ ಇಲಾಖೆಯ ಮಂಚೇಶ್ವರ ಬ್ಲಾಕ್ ವ್ಯಾಪ್ತಿಯ ವೆಟರಿನರಿ ಆಸ್ಪತ್ರೆಯಲ್ಲಿ ರಾತ್ರಿಕಾಲ ಪ್ರಾಣಿಚಿಕಿತ್ಸಾ ಸೇವೆ ನಡೆಸಲು ಪಶುವೈದ್ಯಕೀಯ ವೈದ್ಯರ ದಿನವೇತನ ಆಧಾರದಲ್ಲಿ ನೇಮಕಾತಿ ನಡೆಯಲಿರುವುದು. ವೆಟರಿನರಿ ಸಯನ್ಸ್‍ನಲ್ಲಿ ಪದವಿ ಮತ್ತು ಪಶುವೈದ್ಯಕೀಯ ಕೌನ್ಸಿಲ್ ನೋಂದಣಿ ಹೊಂದಿದವರು ಅರ್ಹರಾಗಿರುತ್ತಾರೆ. ಪ್ರತಿದಿನ 1425 ರೂಪಾಯಿಯಂತೆ ಮಾಸಿಕ ಗರಿಷ್ಠ 38,475 ರೂಪಾಯಿಗಳ ಪ್ರತಿಫಲ ಪಡೆಯಲು ಅರ್ಹರಾಗಿರುತ್ತಾರೆ. ಜೂನ್10 ರಂದು ಬೆಳಿಗ್ಗೆ 10.30 ಕ್ಕೆ ವಿದ್ಯಾನಗರ ಸಿವಿಲ್ ಸ್ಟೇಷನ್ ಎ ಬ್ಲಾಕ್‍ನ ಪ್ರಾಣ Âಸಂರಕ್ಷಣಾ ಕಚೇರಿಯಲ್ಲಿ ಸಂದರ್ಶನ ನಡೆಯಲಿರುವುದು. ಈ ಬಗ್ಗೆ ಮಾಃಇತಿಗಾಗಿ ದೂರವಾಣಿ (04994 255483)ಸಂಖ್ಯೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.