ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಮಟ್ಟದ ವಿಶೇಷ ಚೇತನರ ವಿಶೇಷ ಗ್ರಾಮ ಸಭೆ ಪಂಚಾಯತು ಸಭಾಂಗಣದಲ್ಲಿ ನಡೆಯಿತು. 2022-23ನೇ ಆರ್ಥಿಕ ವರ್ಷದಲ್ಲಿ ಪಂಚಾಯತಿ ವ್ಯಾಪ್ತಿಯ ವಿಕಲಚೇತನರ ಅಭಿವೃದ್ಧಿಗಾಗಿ ಜ್ಯಾರಿಗೊಳಿಸಬೇಕಾದ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅವರ ಅಧ್ಯಕ್ಷತೆಯಲ್ಲಿ ಜರಗಿದ ಗ್ರಾಮ ಸಭೆಯಲ್ಲಿ ಉಪಾಧ್ಯಕ್ಷೆ ಡಾ.ಝಹನಾಸ್ ಹಂಸಾರ್, ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ್, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಬಿ ಹನೀಫ್, ಪಂ. ಸದಸ್ಯರಾದ ರಾಮಚಂದ್ರ, ನರಸಿಂಹ ಪೂಜಾರಿ,ಇಂದಿರಾ,ಕುಸುಮಾವತಿ, ಉಷಾ ಕುಮಾರಿ, ಗ್ರಾ.ಪಂ.ಕಾರ್ಯದರ್ಶಿ ಅನ್ವರ್ ರಹಮಾನ್, ಹೆಡ್ ಕ್ಲಾರ್ಕ್ ಪ್ರೇಮನ್ , ಐಡಿಎಸ್ ಮೇಲ್ವಿಚಾರಕಿ ಪ್ರೇಮಲತಾ, ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಬಾಬು ರಾಜ್, ಸಜಿತ್ ಮೊದಲಾದವರು ಭಾಗವಹಿಸಿದರು.