ಕಾಸರಗೋಡು: ಆದಿವಾಸಿ ಕ್ಷೇತ್ರಗಳಲ್ಲಿ ಸಾಮಾಜಿಕ ಕಾರ್ಯಕರ್ತೆಯರ ಚಟುವಟಿಕೆಯನ್ನು ತಡೆಯುವ ಮೂಲಕ ಕಮ್ಯೂನಿಸ್ಟ್ ಗೂಢಾಲೋಚನೆ ನಡೆಸುತ್ತಿರುವುದಾಗಿ ಡಿ ಎಸ್ ಎಸ್ ಕೇರಳ ರಾಜ್ಯ ಅಧ್ಯPಕ್ಷೆ ರೇಷ್ಮಾ ಕರಿವೇಡಗಂ ತಿಳಿಸಿದ್ದಾರೆ. ಸ್ವಂತ ಹಕ್ಕುಗಳ ಕುರಿತು ಜ್ಞಾನವಿಲ್ಲದ ಆದಿವಾಸಿ ಜನತೆಗೆ ಸಾಮಾಜಿಕ ಮತ್ತು ಆರ್ಥಿಕವಾದ ಸಹಾಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಸುರಕ್ಷತೆ ಮತ್ತು ಮಕ್ಕಳ ಅಧ್ಯಯನದ ಬಗ್ಗೆ ಸರ್ಕಾರಕ್ಕಿಂತ ಹೆಚ್ಚಾಗಿ ಸಾಮಾಜಿಕ ಹಗೂ ಸವಯಂಸೇವಾ ಸಂಘಟನೆಗಳು ಕಾರ್ಯನಿರ್ವಹಿಸುತ್ತವೆ. ಈ ಸಹಾಯವನ್ನು ತಡೆಗಟ್ಟಲು ಕಮ್ಯೂನಿಸ್ಟ್ ಸರ್ಕಾರ ಯತ್ನಿಸುತ್ತಿದೆ.
ಕೋಟ್ಯಂತರ ರೂಪಾಯಿ ಮೊತ್ತವನ್ನು ಸರ್ಕಾರ ಆದಿವಾಸಿ ಕಲ್ಯಾಣಕ್ಕಾಗಿ ಮೀಸಲಿರಿಸುತ್ತಿದ್ದರೂ, ಜನಪ್ರತಿನಿಧಿಗಳ, ಅಧಿಕಾರಿಗಳ ಅಸಮರ್ಪಕ ಯೋಜನೆಗಳಿಂದ ಈ ಸಹಾಯ ಆದಿವಾಸಿ ಪ್ರದೇಶಕ್ಕೆ ತಲುಪುವುದಿಲ್ಲ. ಅಟ್ಟಪ್ಪಾಡಿಯಲ್ಲಿ ಇಂದಿಗೂ ಮಕ್ಕಳು ಪೆÇೀಷಕಾಹಾರದ ಕೊರತೆಯಿಂದ ಮಕ್ಕಳು ಮರಣ ಹೊಂದುವುದನ್ನು ತಡೆಯಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈ ಮಧ್ಯೆ ವಿವಿಧ ಸಂಘ ಸಂಸ್ಥೆಗಳಿಂದ ಲಭಿಸುವ ಸಣ್ಣಪುಟ್ಟ ಸಹಾಯಗಳನ್ನು ಕೂಡಾ ಸರ್ಕಾರದ ಹೆಸರಲ್ಲಿ ಕೊಡಮಾಡುವುದು ಸರಿಯಲ್ಲ. ಈ ರೀತಿಯ ಧೋರಣೆಯೊಂದಿಗೆ ಸರ್ಕಾರ ಮುಂದುವರಿದರೆ ಪ್ರಬಲ ಹೋರಾಟ ಕಾರ್ಯಕ್ರಮಗಳಿಗೆ ಡಿ ಎಸ್ ಎಸ್ ಕೇರಳ ಘಟಕ ನೇತೃತ್ವ ನೀಡಲಿದೆ ಎಂದು ರೇಷ್ಮಾ ಕರಿವೇಡಗಂ ಹೇಳಿಕೆಯಲ್ಲಿ ತಿಳಿಸಿದ್ದಾರೆ.