HEALTH TIPS

ಆನ್‍ಲೈನ್ ಕಲಿಕೆಯ ವಾಟ್ಸ್ ಆಫ್ ಗುಂಪಿನ ಮೂಲಕ ಜಾತ್ಯತೀತತೆ ಮತ್ತು ಹಿಂದೂ ವಿರೋಧಿ ಸಂದೇಶ ಹರಡಲು ಕರೆ; ಕೋದಮಂಗಲಂ- ವಾರಪ್ಪೆಟ್ಟಿ ಎನ್.ಎಸ್.ಎಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇಂತಹದೊಂದು ಕೃತ್ಯ

                                           

               ಕೋತ್ತಮಂಗಲ: ಪತ್ತನಂತಿಟ್ಟ ಜಿಲ್ಲೆಯ ವಾರಪ್ಪೆಟ್ಟಿ ಎನ್ ಎಸ್ ಎಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಾಟ್ಸ್ ಆಪ್ ಗ್ರೂಪ್ ಮೂಲಕ ಜಾತೀಯತೆ  ಹಾಗೂ ಹಿಂದೂ ಧರ್ಮದ ವಿರುದ್ಧದ ಪ್ರಚಾರಕ್ಕೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಹಿಂದೂ ವಿರೋಧಿ ಉಲ್ಲೇಖಗಳೊಂದಿಗೆ ಪೋಸ್ಟ್ ಗಳನ್ನು  ಗ್ರೂಪ್‍ಗೆ ಹಾಕಲಾಯಿತು ಮತ್ತು ಅದನ್ನು ಹರಡಲು ಸೂಚಿಸಲಾಗಿದೆ. ಬಳಿಕ ಪಾಲಕರು ದೂರು ನೀಡಿದ್ದು ಘಟನೆ ವಿವಾದಕ್ಕೀಡಾಗಿದೆ.

         ಪ್ಲಸ್ ಒನ್ ಸೈನ್ಸ್ ಬ್ಯಾಚ್‍ನ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳನ್ನು ನಡೆಸುವ ಅಧಿಕೃತ ವಾಟ್ಸಾಪ್ ಗುಂಪಿನ ‘ಂ1Phಥಿsiಛಿs 2021-22’ ನಲ್ಲಿ ಸಂದೇಶ ಕಾಣಿಸಿಕೊಂಡಿದೆ. ಮಂಗಳವಾರ ಸಂಜೆ 5.30ಕ್ಕೆ ಕೆಎಸ್‍ಕೆ ಮುಹಮ್ಮದ್ ಸಖಾಫಿ ಅವರ ನೋಂದಾಯಿತ ಸಂಖ್ಯೆಯಿಂದ ಪೋಸ್ಟ್ ಹಂಚಿಕೆಯಾಗಿತ್ತು. 

             ಭಾರತ ನಿಜವಾಗಿಯೂ ಯಾರದ್ದು ಎಂಬ ಪ್ರಶ್ನೆಯೊಂದಿಗೆ ಪೋಸ್ಟ್ ಆರಂಭವಾಗುತ್ತದೆ. ನೀವು ಭಾರತದ ಇತಿಹಾಸವನ್ನು ಕೊನೆಯವರೆಗೂ ಓದಬಹುದು, ಗೌರಿ ಸುಲ್ತಾನರಿಂದ ನರೇಂದ್ರ ಮೋದಿಯ ವರೆಗೆ ಪೋಸ್ಟ್ ಹಿಂದೂ ವಿರೋಧಿ ಮಾಹಿತಿಯಿಂದ ತುಂಬಿದೆ. 1000 ವರ್ಷಗಳ ಮುಸ್ಲಿಂ ಸಾಮ್ರಾಜ್ಯದ ಶೀರ್ಷಿಕೆಯಡಿಯಲ್ಲಿ ಹಿಂದೂಗಳು ಭಾರತದಲ್ಲಿ ಉಳಿದಿದ್ದಾರೆ ಮತ್ತು ಮುಸ್ಲಿಂ ಆಡಳಿತಗಾರರಿಂದ ಎಂದಿಗೂ ಅನ್ಯಾಯವಾಗಲಿಲ್ಲ ಎಂದು ಹೇಳಲಾಗಿದೆ.

                   ಇತ್ತೀಚಿನ ಮೊಘಲ್ ಆಕ್ರಮಣ ಮತ್ತು ಹಿಂದೂ ಹತ್ಯಾಕಾಂಡದ ದುಷ್ಕøತ್ಯಗಳನ್ನು ಸಮರ್ಥಿಸುವ ಗುರಿಯನ್ನು ಪೋಸ್ಟ್  ನಲ್ಲಿ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ. ಹಿಂದೂಗಳಿಗೆ 100 ವರ್ಷದಷ್ಟೂ ಇತಿಹಾಸವಿಲ್ಲ. ಮತ್ತು ಅವರು ಮುಸ್ಲಿಮರ ವಿನಾಶದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಪೋಸ್ಟ್ ಹೇಳುತ್ತದೆ. ಈ ಮಾಹಿತಿಯನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಲಭ್ಯವಾಗುವಂತೆಯೂ ಇದು ಕರೆ ನೀಡುತ್ತದೆ.

                ಸಂದೇಶವನ್ನು ಹಲವಾರು ಬಾರಿ ಫಾರ್ವರ್ಡ್ ಮಾಡಲಾಗಿದೆ ಎಂದೂ ಅದು ಹೇಳುತ್ತದೆ. ಅನೇಕ ವಿದ್ಯಾರ್ಥಿಗಳು ಆನ್‍ಲೈನ್ ತರಗತಿಗಳಿಗೆ ತಮ್ಮ ಪೋಷಕರ ಮೊಬೈಲ್  ಸಂಖ್ಯೆಯನ್ನು ಬಳಸುತ್ತಾರೆ. ಆದ್ದರಿಂದ, ಸಂದೇಶವು ಉದ್ದೇಶಪೂರ್ವಕವಾಗಿದೆ ಎಂಬುದು ಸ್ಪಷ್ಟವಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಅಧ್ಯಯನ ಗುಂಪಿನಲ್ಲಿ ಇಂತಹ ದ್ವೇಷಪೂರಿತ ಸಂದೇಶವು ಕಾಣಿಸಿಕೊಂಡಿರುವುದು ನಿಗೂಢತೆಯನ್ನು ಹೆಚ್ಚಿಸುತ್ತದೆ. ಕೋದಮಂಗಲ ಹಿಂದೆಯೂ ಉಗ್ರ ಮೂಲಭೂತವಾದಿಗಳ ಪ್ರಭಾವಕ್ಕೆ ಒಳಗಾಗಿತ್ತು. ಪೋಷಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries