ಕುಂಬಳೆ: ಮಂಜೇಶ್ವರ ಉಪಜಿಲ್ಲಾ ಶಾಲಾ ಪ್ರವೇಶೋತ್ಸವ ಪುತ್ತಿಗೆ ಬಾಡೂರುಪದವು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು. ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಪುತ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಸ್ಥಾಯಿ ಸಮಿತಿ ಸದಸ್ಯರಾದ ಮಜೀದ್, ಎಂ. ಅನಿತಾ, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಅನಿಲ್ ಕುಮಾರ್, ಕಾಸರಗೋಡು ಡಿಪಿಒ ನಾರಾಯಣ ದೇಲಂಪಾಡಿ, ಮಂಜೇಶ್ವರ ಎಇಒ ವಿ. ದಿನೇಶ್, ಮಂಜೇಶ್ವರ ಬಿಪಿಸಿಪಿ ವಿಜಯಕುಮಾರ್, ಕಾಸರಗೋಡು ಡಯಟ್ ಪ್ರತಿನಿಧಿ ಶಶಿಧರ, ಬಾಡೂರು ಎಎಲ್ ಪಿ ಶಾಲಾ ವ್ಯವಸ್ಥಾಪಕಿ ಶ್ರೀಮತಿ, ನಿವೃತ್ತ ಮುಖ್ಯೋಪಾಧ್ಯಾಯ ಎಂ.ಶಂಕರ ರೈ, ಪುತ್ತಿಗೆ ಪಂಚಾಯತಿ ಮಾಜಿ ಉಪಾಧ್ಯಕ್ಷ ಪಿ.ಬಿ.ಮಹಮ್ಮದ್, ಫಾರೂಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರಾಧ್ಯಾಪಕ ಯೂಸುಫ್, ಮಾಜಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ.ಎಂ.ಹಮೀದ್ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯ ಎನ್‍ಕೆ ಸುಧೀರ್ ಸ್ವಾಗತಿಸಿ, ಮಂಜೇಶ್ವರ ಬಿಆರ್‍ಸಿ ಪ್ರತಿನಿಧಿ ಪೃಥ್ವಿರಾಜ್ ವಂದಿಸಿದರು.