HEALTH TIPS

ಪತ್ರಕರ್ತರಿಗೆ ಗುರುತುಚೀಟಿ ಹಾಗೂ ಮಕ್ಕಳಿಗೆ ಕಲಿಕೋಪಕರಣ ವಿತರಣೆ

               ಕುಂಬಳೆ: ವೃತ್ತ ಪತ್ರಿಕೆಗಳು ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆ, ಸಂವಿಧಾನ ರಕ್ಷಕವಾಗಿ ಸಮಾಜಿಕ ಪರಿವರ್ತನೆಯಲ್ಲಿ ಪ್ರಮುಖಪಾತ್ರ ವಹಿಸುತ್ತವೆ. ಬದಲಾಗುತ್ತಿರುವ ವ್ಯವಸ್ಥೆಯ ಮಧ್ಯೆ ಮಾಧ್ಯಮ ಬಹುಮುಖದ ವಿಸ್ತಾರತೆ ಪಡೆದಿದ್ದು, ವಸ್ತುನಿಷ್ಠ, ವ್ಯಸನ ಮುಕ್ತ ಮಾಧ್ಯಮಗಳು ನಮ್ಮ ಶಕ್ತಿ ಎಂದು ಹಿರಿಯ ಸಾಹಿತ್ತಿಕ, ಸಾಂಸ್ಕøತಿಕ ನೇತಾರ, ಕಸಾಪ ದಕ್ಷಿಣ ಕನ್ನಡ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದರು.

           ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೇರಳ ಘಟಕ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ಆಶ್ರಯದಲ್ಲಿ ಕುಂಬಳೆ ಮಾಧವ ಪೈ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡ ಪತ್ರಕರ್ತರಿಗೆ ಗುರುತುಚೀಟಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


          ಈ ಸಂದರ್ಭ ಪತ್ರಕರ್ತರ ಸದಸ್ಯರ ಮಕ್ಕಳಿಗೆ ಕಲಿಕೋಪಕರಣ ವಿತರಿಸಿ ಮಾತನಾಡಿದ ನಿವೃತ್ತ ಬ್ಯಾಂಕ್ ಪ್ರಬಂಧಕ, ಪಟ್ಲ ಫೌಂಡೇಶನ್ ಕುಂಬಳೆ ಘಟಕದ ಸ್ಥಾಪಕಾಧ್ಯಕ್ಷ ಎಸ್.ಜಗನ್ನಾಥ ಶೆಟ್ಟಿ ಮಾತನಾಡಿ, ಗಡಿನಾಡು ಕಾಸರಗೋಡಿನ ಕನ್ನಡ ಅಸ್ಮಿತೆಯನ್ನು ಕಾಪಿಡುವಲ್ಲಿ ಇಲ್ಲಿಯ ಪತ್ರಕರ್ತರು, ಪತ್ರಿಕೆಗಳ ಕೊಡುಗೆ ಮಹತ್ತರವಾದುದು. ಸವಾಲುಗಳ ಮಧ್ಯೆ ಪ್ರಗತಿಶೀಲ ಪತ್ರಿಕೋದ್ಯಮದ ಮೂಲಕ ಸತ್ಪ್ರಜೆ, ಸಮಾಜ ನಿರ್ಮಾಣದಲ್ಲಿ ಗಡಿನಾಡಿನ ಶ್ರೀಮಂತ ಪರಂಪರೆ ಕನ್ನಡ ನಾಡುನುಡಿಗೆ ವ್ಯಾಪಕ ಕೊಡುಗೆ ನೀಡಿದೆ ಎಂದರು.

         ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಹಿರಿಯ ಧಾರ್ಮಿಕ ಮುಂದಾಳು, ಉದ್ಯಮಿ ಗೋಪಾಲ ಶೆಟ್ಟಿ ಅರಿಬೈಲು, ಉದ್ಯಮಿ ಶ್ರೀಧ ಶೆಟ್ಟಿ ಮುಟ್ಟಂ, ಕರ್ನಾಟಕ ಜಾನಪದ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾಧಶ್ಯಕ್ಷ ಪ್ರವೀಣ್ ಕುಮಾರ್ (ಪಮ್ಮಿ)ಕೊಡಿಯಾಲಬೈಲು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೇಂದ್ರ ಘಟಕದ ಸದಸ್ಯ ಅಖಿಲೇಶ್ ನಗುಮುಗಂ ಉಪಸ್ಥಿತರಿದ್ದು ಶುಭಹಾರೈಸಿದರು. ಈ ಸಂದರ್ಭ ಹಿರಿಯ ಸಂಘಟಕ ಪ್ರಭಾಕರ ಕಲ್ಲೂರಾಯ ಬನದಗದ್ದೆ ಹಾಗೂ ಪಮ್ಮಿ ಕೊಡಿಯಾಲಬೈಲು ಅವರನ್ನು ಗೌರವಿಸಲಾಯಿತು.   

         ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ ಸ್ವಾಗತಿಸಿ, ಖಜಾಂಜಿ ಪುರುಷೋತ್ತಮ ಪೆರ್ಲ ವಂದಿಸಿದರು. ವಿ.ಜಿ.ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತರ ಮಕ್ಕಳು ಉಪಸ್ಥಿತರಿದ್ದು ಕಲಿಕೋಪಕರಣಗಳನ್ನು ಪಡೆದುಕೊಂಡರು. ಈ ಸಂದರ್ಭ ಇತ್ತೀಚೆಗೆ ಪತ್ರಕರ್ತರ ಸಂಘದ ನೇತೃತ್ವದಲ್ಲಿ ನಾರಾಯಣಮಂಗಲ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಗೆ ವಾಟರ್ ಪ್ಯೂರಿಪಯರ್ ಘಟಕವನ್ನು ಹಸ್ತಾಂತರಿಸಲಾಯಿತು. ಪ್ರಬಂಧಕ ಗೋಪಾಲಕೃಷ್ಣ ಭಟ್ ಕಬೆಕ್ಕೋಡು ಶಾಲೆಯ ಪರವಾಗಿ ಪಡೆದುಕೊಂಡರು. ಕೆ.ಶ್ರೀಕಾಂತ್ ನಾರಾಯಣ್ ಸಹಕರಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries