HEALTH TIPS

ರಾಷ್ಟ್ರಪತಿ ಚುನಾವಣೆ; ಮುನ್ನಲೆಯಲ್ಲಿ ಸುಧಾಮೂರ್ತಿ ಹೆಸರು

 ಚುನಾವಣಾ ಆಯೋಗವು (election commission) ಗುರುವಾರದಂದು ರಾಷ್ಟ್ರಪತಿ ಚುನಾವಣೆಯನ್ನು(president elections) ಘೋಷಿಸುತ್ತಿದ್ದಂತೆ, ಜನರಲ್ಲಿ ಮುಂದಿನ ರಾಷ್ಟ್ರಪತಿ ಯಾರಾಗಬಹುದು ಎಂದು ಕುತೂಹಲ ಮೂಡಿದೆ. ಅಭ್ಯರ್ಥಿಗಳಿಗೆ ನಾಮ ಸಲ್ಲಿಸಲು ಜೂನ್ 18 ಕೊನೆಯ ದಿನವಾಗಿದ್ದು,ಜುಲೈ 21 ರಂದು ಚುನಾವಣೆ ನಡೆಯಲಿದೆ.

ಇದರ ಮತ ಎಣಿಕೆ ಜುಲೈ ರಂದು ನಡೆಯಲಿದೆ. ರಾಷ್ಟ್ರಪತಿ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಜನರಲ್ಲಿ ತೀವ್ರ ಕುತೂಹಲ ಕೆರಳಿದ್ದು, ಮುಂದಿನ ರಾಷ್ಟ್ರಪತಿ ಯಾರಿರಬಹುದು ಎಂಬುದರ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ರಾಜಕೀಯ ಹಾಗು ರಾಜಕೀಯೇತರ ವ್ಯಕ್ತಿಗಳ ಹೆಸರು ಕೇಳಿಬರುತ್ತಿದೆ. ಅವುಗಳಲ್ಲಿ, ಕನ್ನಡತಿ ಹಾಗೂ ಇನ್ಫೋಸಿಸ್ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ ಹೆಸರೂ ಮುನ್ನಲೆಯಲ್ಲಿದೆ.

`ಸರಳ ವ್ಯಕ್ತಿತ್ವದ ಒಡತಿ ಸುಧಾ ಮೂರ್ತಿ

ಶ್ರೀಮತಿ ಸುಧಾ ಮೂರ್ತಿ ಹೆಸರು ಕೇವಲ ಕನ್ನಡಿಗರಿಗಷ್ಟೇ ಅಲ್ಲಾ , ವಿಶ್ವದಾದ್ಯಂತ ಚಿರಪರಿಚಿತರು. ಅಪ್ಪಟ ಕನ್ನಡಿಗರಾದ ಇವರು, ಅಸಾಮಾನ್ಯ ಸಾಧಕಿ. ಇವಿಷ್ಟೇ ಅಲ್ಲದೆ, ಕನ್ನಡ ಹಾಗು ಇಂಗ್ಲಿಷ್ ನ ಖ್ಯಾತ ಬರಹಗಾರ್ತಿ ಹಾಗೂ ಸಮಾಜ ಸೇವಕಿಯೂ ಹೌದು. ಸುಧಾರವರು ಜನಿಸಿದ್ದು 19 ಆಗಸ್ಟ್ 1950ರಂದು ಕರ್ನಾಟಕದ ಶಿಗ್ಗಾಮ್ ನ ಡಾ. ಆರ್ ಎಚ್ ಕುಲಕರ್ಣಿ ಮತ್ತು ವಿಮಲಾ ದಂಪತಿಯ ಪುತ್ರಿಯಾಗಿ ಜನಿಸಿದರು.

ಸುಧಾ ಮೂರ್ತಿ ಬಿ.ವಿ.ಬಿ ಸೈನ್ಸ್ ಹಾಗು ಟೆಕ್ನಲಾಜಿ ಕಾಲೇಜಿನಲ್ಲಿ ತಮ್ಮ ಎಂಜಿನಿಯರಿಂಗ್ ಪದವಿ ಮುಗಿಸಿದರು. ತರಗತಿಯಲ್ಲಿ ಮೊದಲಿಗಳಾಗಿದ್ದ ಸುಧಾ ಅಂದಿನ ಮುಖ್ಯಮಂತ್ರಿ ಶ್ರೀ ದೇವರಾಜ ಅರಸರಿಂದ ಚಿನ್ನದ ಪದಕವನ್ನೂ ಪಡೆದುಕೊಂಡರು. ನಂತರ ಎಂ.ಇಗಾಗಿ ಭಾರತೀಯ ವಿಜ್ನ್ಯಾನ ಸಂಸ್ಥೆ ಸೇರಿದರು. ಇಲ್ಲೂ ಪ್ರಥಮ ಸ್ಥಾನ ಪಡೆದು ಭಾರತೀಯ ಎಂಜಿನಿಯರಿಂಗ್ ಸಂಸ್ಥೆಯಿಂದ ಬಂಗಾರದ ಪದಕ ಗಳಿಸಿದರು.

ಭಾರತದ ಮೊದಲ ಮಹಿಳಾ ಎಂಜಿನಿಯರ್

ಭಾರತದ ಅಂದಿನ ಅತಿ ದೊಡ್ಡ ವಾಹನ ಉತ್ಪಾದಕ ಸಂಸ್ಥೆ ಟೆಲ್ಕೋ (ಟಾಟಾ ಎಂಜಿನಿಯರಿಂಗ್ ಅಂಡ್ ಲೋಕೋಮೆಟಿವ್ ಕಂಪೆನಿ) ಅಥವಾ ಇಂದಿನ ಟಾಟಾ ಮೋಟಾರ್ಸ್ ನೇಮಿಸಿದ ಮೊದಲ ಮಹಿಳಾ ಎಂಜಿನಿಯರ್ ಸುಧಾಮೂರ್ತಿ. ಕಂಪೆನಿಗಳಲ್ಲಿ ಪುರುಷರಿಗಷ್ಟೇ ಸೀಮಿತವಾಗಿದ್ದ ಕೆಲಸದ ಕುರಿತು ದನಿ ಎತ್ತಿದರು. ನಂತರ ಪುಣೆ, ಮುಂಬಾಯಿ ಸೇರಿದಂತೆ ಹಲವು ಕಡೆಗಳಲ್ಲಿ ಡೆವಲೆಪಮೆಂಟ್ ಎಂಜಿನಿಯರ್ ಆಗಿ ಕೆಲಸ ಮಾಡಿದರು.

ಕೆಲ ಕಾಲ ಪುಣೆಯ ವಾಲಚಂದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನಲ್ಲಿ ಹಿರಿಯ ಸಿಸ್ಟಮ್ ಅನಾಲಿಸ್ಟ್ ಆಗಿ ಕಾರ್ಯ ನಿರ್ವಹಿಸಿದರು. ಇನ್ಫೋಸಿಸ್ ಸ್ಥಾಪನೆ ಆಗುವ ಸಮಯದಲ್ಲಿ ತಮ್ಮ ಉಳಿತಾಯದ ಹತ್ತು ಸಾವಿರ ರೂಪಾಯಿಗಳನ್ನ ದೇಣಿಗೆಯಾಗಿ ನೀಡಿದರು. ೧೯೯೬ರಲ್ಲಿ ಹುಟ್ಟುಹಾಕಿದ ಇನ್ಫೋಸಿಸ್ ಸಂಸ್ಥೆಯಲಿ ಈಗಲೂ ಟ್ರಸ್ಟಿಯಾಗಿದ್ದಾರೆ. ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗು ಯುವ ಜನತೆಗೆ ಬೋಧನೆ ನೀಡುತ್ತಿದ್ದಾರೆ.

ವೈಯಕ್ತಿಕ ಜೀವನ

ಪುಣೆಯ ಟೆಲ್ಕೊದಲ್ಲಿ ಕೆಲಸ ಮಾಡುತ್ತಿದ್ದಾಗ ನಾರಾಯಣಮೂರ್ತಿಯನ್ನು ಭೇಟಿಯಾದರು ಮತ್ತು ಪ್ರೀತಿಸಿ ಮದುವೆಯಾದರು. ಇವರಿಗೆ ಅಕ್ಷತಾ ಹಾಗೂ ರೋಹನ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಸಮಾಜ ಸೇವಕಿ

ಸುಧಾಮೂರ್ತಿ ತಮ್ಮ ಸಾಮಾಜಿಕ ಸೇವೆ ಮೂಲಕವೇ ಖ್ಯಾತಿ ಗಳಿಸಿದವರು. ಅವರಿಗೆ ಮಹಿಳಾ ಸಬಲೀಕರಣ, ಗ್ರಾಮೀಣ ಜನರ ಶಿಕ್ಷಣ, ಬಡತನ ನಿರ್ಮೂಲನೆ, ವಿದ್ಯಾಭ್ಯಾಸ ಮುಂತಾದ ವಿಷ್ಯಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಇಷ್ಟೇ ಅಲ್ಲದೆ, ಸಾರ್ವಜನಿಕ ಶೌಚಾಲಯಗಳನ್ನೂ ಕಟ್ಟಿಸುತ್ತಿದ್ದರೆ. ಈ ಹಿಂದೆ ಪ್ರವಾಹ ಬಂದಾಗ್ಲೂ ತಮ್ಮ ಸಂಸ್ಥೆ ಮೂಲಕ ಅಗತ್ಯ ವಸ್ತುಗಳನ್ನು ಜನರಿಗೆ ಪೂರೈಸಿದ್ದಾರೆ.

ಪ್ರಶಸ್ತಿಗಳು

ತಮ್ಮ ಶಿಕ್ಷಣದ ಸಂದರ್ಭದಿಂದಲೂ ಅನೇಕ ಪ್ರಶಸ್ತಿಗಳನ್ನು ಸುಧಾ ಮೂರ್ತಿ ಪಡೆದಿದ್ದರೆ. 2004ಲ್ಲಿ ಚೆನ್ನೈನಲ್ಲಿ ರಾಜಲಕ್ಷ್ಮಿ ಪ್ರಶಸ್ತಿ, 2006ಲ್ಲಿ ಪದ್ಮಶ್ರೀ ಹಾಗೂ ಸಾಹಿತ್ಯಕ್ಕಾಗಿ ಆರ್ ಕೆ ನಾರಾಯಣ್ ಪ್ರಶಸ್ತಿ,2019 ರಲ್ಲಿ ಐಐಟಿ ಕಾನ್ಪುರದಿಂದ ಗೌರವ ಡಾಕ್ಟ್ರೇಟ್ ಪದವಿಯನ್ನು ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಸರಳತೆಯ ಒಡತಿ,ಸಮಾಜ ಸೇವಕಿ ಸುಧಾ ಮೂರ್ತಿ ರಾಷ್ಟ್ರಪತಿಯಾಗಲು ಎಲ್ಲ ಅರ್ಹತೆಗಳನ್ನೂ ಹೊಂದಿದ್ದಾರೆ. ಜನರೂ ಬೆಂಬಲ ಸೂಚಿಸುತ್ತಾ ಇದ್ದಾರೆ. ರಾಷ್ಟ್ರಪತಿ ಆದಲ್ಲಿ ಸಮಾಜದಲ್ಲಿ ಸಾಕಷ್ಟು ಸುಧಾರಣೆಗಳನ್ನು ಕಾಣಬಹುದೆಂದು ನಿರೀಕ್ಷಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries