ಕುಂಬಳೆ : ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ) ನ ರಾಜ್ಯ ಸಮಿತಿಯ ನೇತೃತ್ವದಲ್ಲಿ ಜೂನ್ 23, 24,25ರಂದು ತೃಶ್ಶೂರು ಅಂಗಮಾಲಿಯಲ್ಲಿ ನಡೆಯಲಿರುವ ಫೋಟೋ ಫೆಸ್ಟ್ ಕಾರ್ಯಕ್ರಮದ ಪ್ರಚಾರಾರ್ಥ ರಾಜ್ಯ ಸಮಿತಿಯ ನೇತೃತ್ವದಲ್ಲಿ ಹೊರಟ ವಾಹನ ಪ್ರಚಾರಕ್ಕೆ ಎಕೆಪಿಎ ಕುಂಬಳೆ ವಲಯ ಸಮಿತಿಯ ವತಿಯಿಂದ ಸ್ವಾಗತವನ್ನು ನೀಡಲಾಯಿತು.
ಭಾನುವಾರ ಕಾಸರಗೋಡು ಜಿಲ್ಲಾ ಪರ್ಯಟನೆಯ ನಂತರ ಕುಂಬಳೆಯಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಎಕೆಪಿಎ ರಾಜ್ಯ ಫೋಟೋಗ್ರಫಿ ಕ್ಲಬ್ ಸಂಚಾಲಕ ಗೋವಿಂದನ್ ಚೆಂಗರಂಗಾಡ್ ಉದ್ಘಾಟಿಸಿದರು. ಎಕೆಪಿಎ ರಾಜ್ಯ ಅಧ್ಯಕ್ಷ ಗಿರೀಶ್ ಪಟ್ಟಾಂಬಿ ಫೇಸ್ ಬುಕ್ ಲೈವ್ ಮೂಲಕ ಮಾತನಾಡಿ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡಿದರು. ರಾಜ್ಯ ಕಾರ್ಯದರ್ಶಿ ಉಣ್ಣಿ ಕೋವೋಡ್, ಜಿಲ್ಲಾ ಅಧ್ಯಕ್ಷ ಎನ್.ಎ. ಭರತನ್, ರಾಜ್ಯ ಸಮಿತಿ ಸದಸ್ಯ ಹರೀಶ್ ಪಾಲಕ್ಕುನ್ನು, ಜಿಲ್ಲಾ ಕಾರ್ಯದರ್ಶಿ ವಾಸು ಕಾಸರಗೋಡು, ಜಿಲ್ಲಾ ಕೋಶಾಧಿಕಾರಿ ವೇಣು ಕುಂಬಳೆ, ಜಿಲ್ಲಾ ಪದಾಧಿಕಾರಿ ಶರೀಫ್, ಜಿಲ್ಲಾ ಉಪಾಧ್ಯಕ್ಷ ವಿಜಯನ್ ಕೆ.ನಾಯರ್ ಮೊದಲಾದವರು ಮಾತನಾಡಿದರು. ಕುಂಬಳೆ ವಲಯ ಅಧ್ಯಕ್ಷ ಸುನಿಲ್ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಸುರೇಶ್ ಆಚಾರ್ಯ ಸ್ವಾಗತಿಸಿ, ಪಿಆರ್‍ಒ ಉದಯ ಕಂಬಾರು ವಂದಿಸಿದರು. ಉಪ್ಪಳ, ಕುಂಬಳೆ, ಬದಿಯಡ್ಕ ಘಟಕಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.