ಮುಂಬೈ: ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆಗಾಗಿ ರಾಷ್ಟ್ರೀಯ ಹೈ ಸ್ಪೀಡ್ ರೈಲು ನಿಗಮ ಲಿ. (ಎನ್‌ಎಚ್‌ಎಸ್‌ಆರ್‌ಸಿಎಲ್) ವಶಪಡಿಸಿಕೊಂಡಿರುವ ಜಮೀನಿಗೆ ಪರಿಹಾರವಾಗಿ ನೀಡಲಾದ ಹಣದ ಮೊತ್ತದ ಮೇಲೆ ಆದಾಯ ತೆರಿಗೆ ಕಡಿತವನ್ನು ಮಾಡುವಂತಿಲ್ಲವೆಂದು ಬಾಂಬೆ ಹೈಕೋರ್ಟ್ ಶುಕ್ರವಾರ ಆದೇಶ ನೀಡಿದೆ.
ಮುಂಬೈ: ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆಗಾಗಿ ರಾಷ್ಟ್ರೀಯ ಹೈ ಸ್ಪೀಡ್ ರೈಲು ನಿಗಮ ಲಿ. (ಎನ್‌ಎಚ್‌ಎಸ್‌ಆರ್‌ಸಿಎಲ್) ವಶಪಡಿಸಿಕೊಂಡಿರುವ ಜಮೀನಿಗೆ ಪರಿಹಾರವಾಗಿ ನೀಡಲಾದ ಹಣದ ಮೊತ್ತದ ಮೇಲೆ ಆದಾಯ ತೆರಿಗೆ ಕಡಿತವನ್ನು ಮಾಡುವಂತಿಲ್ಲವೆಂದು ಬಾಂಬೆ ಹೈಕೋರ್ಟ್ ಶುಕ್ರವಾರ ಆದೇಶ ನೀಡಿದೆ.
ನ್ಯಾಯಮೂರ್ತಿಗಳಾದ ಎಸ್.ವಿ. ಗಂಗಾಪುರವಾಲಾ ಹಾಗೂ ಎಂ.ಜಿ. ಸೆವ್ಲಿಕಾರ್ ಅವರನ್ನೊಳಗೊಂಡ ನ್ಯಾಯಪೀಠ ಗುರುವಾರ ಈ ಆದೇಶ ಹೊರಡಿಸಿದೆ. ಬುಲೆಟ್ ರೈಲು ಜನೆಗಾಗಿ ಥಾಣೆ ಜಿಲ್ಲೆಯ ಭಿವಂಡಿಯಲ್ಲಿ ಎನ್‌ಎಚ್‌ಎಸ್‌ಆರ್ ಸಿಎಲ್ ತನ್ನ ಜಮೀನನನ್ನು ಸ್ವಾಧೀನಪಡಿಸಿಕೊಂಡಾಗ ತನಗೆ ನೀಡಲಾದ ಪರಿಹಾರಧನದಿಂದ ಆದಾಯ ತೆರಿಗೆಯನ್ನು ಕಡಿತಗೊಳಿಸಿರುವುದನ್ನು ಪ್ರಶ್ನಿಸಿ ಸೀಮಾ ಪಾಟೀಲ್ ಎಂಬವರು ಬಾಂಬೆ ಹೈಕೋರ್ಟ್‌ನ ಮೆಟ್ಟಲೇರಿದ್ದರು. ಸಾರ್ವಜನಿಕ ಯೋಜನೆಗಾಗಿ ಅರ್ಜಿದಾರರ ಜಮೀನನ್ನು ಸಾವಧೀನಪಡಿಸಲಾಗಿದೆಯೆಂಬ ಅಂಶವನ್ನು ನ್ಯಾಯಾಲಯವು ತನ್ನ ಆದೇಶದಲ್ಲಿ ಗಣನೆಗೆ ತೆಗೆದುಕೊಂಡಿದೆ. ಸಾರ್ವಜನಿಕ ಯೋಜನೆಯ ಅನುಷ್ಠಾನದ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದಕ್ಕಾಗಿ ಖಾಸಗಿ ಸಂಧಾನಗಳು ಹಾಗೂ ಖರೀದಿಯ ಮೂಲಕ ಆಸ್ತಿಯನ್ನು ಸ್ವಾಧೀನಪಡಿಸಲಾಗಿರುವ ಬಗ್ಗೆ ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.
''ಒಂದು ವೇಳೆ ಪಕ್ಷದಾರರು ಸಂಧಾನಗಳು ಹಾಗೂ ನೇರ ಖರೀದಿಗೆ ಒಪ್ಪಿಕೊಳ್ಳದೆ ಇದ್ದಲ್ಲಿ, ಅಂತಹ ಆಸ್ತಿಗಳನ್ನು ಕಡ್ಡಾಯವಾಗಿ ಸ್ವಾಧೀನಪಡಿಸಿಕೊಳ್ಳುವ ಕ್ರಮಕ್ಕೆ ಮುಂದಾಗಬಹುದಾಗಿದೆ'' ಎಂದು ನ್ಯಾಯಪೀಠ ಅಭಿಪ್ರಾಯಿಸಿತು.
ಪರಿಹಾರವಾಗಿ ನೀಡಲಾದ ಮೊತ್ತದ ಮೇಲೆ ಯಾವುದೇ ಆದಾಯ ತೆರಿಗೆಯನ್ನು ವಿಧಿಸುವಂತಿಲ್ಲ. ಹೀಗಾಗಿ ಅರ್ಜಿದಾರರಿಗೆ ನೀಡಲಾದ ಪರಿಹಾರಧನದ ಮೇಲೆ ಟಿಡಿಎಸ್ (ಟ್ಯಾಕ್ಸ್ ಡಿಡಕ್ಟಡ್ ಎಟ್ ಸೋರ್ಸ್) ಮೊತ್ತವನ್ನು ಕಡಿತಗೊಳಿಸುವಂತಿಲ್ಲ. ಆದುದರಿಂದ ಎನ್‌ಎಚ್‌ಎಸ್‌ಆರ್‌ಸಿಎಲ್ ಸಂಸ್ಥೆಯು ಖಾಸಗಿ ಸಂಧಾನಗಳು ಹಾಗೂ ಮಾರಾಟ ಒಪ್ಪಂದದ ಮೂಲಕ ಸ್ವಾಧೀನಪಡಿಸಿಕೊಂಡ ಆಸ್ತಿಗೆ ಅರ್ಜಿದಾರರು ಪಡೆದ ಆದಾಯಕ್ಕೆ ಆದಾಯತೆರಿಗೆಯಿಂದ ವಿನಾಯಿತಿ ನೀಡಲಾಗಿದೆಯೆಂದು ನ್ಯಾಯಪೀಠ ತಿಳಿಸಿದೆ.