ಬದಿಯಡ್ಕ: ಪೆರಡಾಲ ನವಜೀವನ ವಿದ್ಯಾಲಯದಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸರೋಜ ಎನ್. ಅವರನ್ನು ಶಾಲೆಯಿಂದ ಬೀಳ್ಕೊಡಲಾಯಿತು. ನವಜೀವನ ವಿದ್ಯಾಸಂಸ್ಥೆಗಳಲ್ಲಿ ಕಳೆದ 16 ವರ್ಷಗಳಿಂದ ಅವರು ಸೇವೆಯನ್ನು ಸಲ್ಲಿಸಿದ್ದರು. ಬೀಳ್ಕೊಡುಗೆ ಸಮಾರಂಭದಲ್ಲಿ ಶಾಲಾ ವ್ಯವಸ್ಥಾಪಕ ಡಾ.ಸೂರ್ಯ ಎನ್ ಶಾಸ್ತ್ರಿ ಮಾತನಾಡಿ ಪುಟ್ಟ ಮಕ್ಕಳನ್ನು ತಿದ್ದಿ ತೀಡಿ ಅವರ ಭವಿಷ್ಯವನ್ನು ಸೃಷ್ಟಿಸುವಲ್ಲಿ ಅಧ್ಯಾಪಕರ ಪಾತ್ರ ಮಹತ್ತರವಾಗಿದೆ. ಅದನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಸರೋಜ ಎನ್. ಅವರು ಯಶಸ್ಸನ್ನು ಕಂಡಿದ್ದಾರೆ ಎಂದರು. ಶಾಲಾ ಆಡಳಿತ ಸಮಿತಿಯ ಉಪಾಧ್ಯಕ್ಷ ನವೀನ್ ಬನಾರಿ, ಕೋಶಾಧಿಕಾರಿ ವೆಂಕಟ್ರಮಣ ಭಟ್ ಪೆರ್ಮುಖ, ಜೊತೆಕಾರ್ಯದರ್ಶಿ ರಮೇಶ ಕೆ., ನವಜೀವನ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಮಿನಿ ಪಿ., ಆಡಳಿತ ಸಮಿತಿ ಕಾರ್ಯಕಾರೀ ಸಮಿತಿ ಸದಸ್ಯ ಕೃಷ್ಣ ಪ್ರಸಾದ ರೈ, ಉದನೇಶ ಇಕ್ಕೇರಿ, ನವಜೀವನ ವಿದ್ಯಾಲಯದ ಅಧ್ಯಾಪಕ ಹಾಗೂ ಅಧ್ಯಾಪಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಸಹೋದ್ಯೋಗಿ ಶಿಕ್ಷಕ ವೃಂದದವರು ಉಡುಗೊರೆಯನ್ನು ನೀಡಿದರು. ಸರೋಜ ಅವರು ಶಾಲೆಗೆ ತನ್ನ ಕಿರುಕಾಣಿಕೆಯನ್ನು ನೀಡಿದರು. ವೆಂಕಟರಾಜ ಕಬೆಕ್ಕೋಡು ಸ್ವಾಗತಿಸಿ, ಅಮಿತಾ ವಂದಿಸಿದರು. ದಿವ್ಯಶ್ರೀ ಎನ್.ಎ. ಪ್ರಾರ್ಥನೆ ಹಾಡಿದರು.